ದೇವದುರ್ಗ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ದೇವದುರ್ಗ ಪರಿಸರ ಪ್ರೇಮಿಗಳ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಂಟಿಯಾಗಿ ಬುಧವಾರ ಮನವಿ ಸಲ್ಲಿಸಿದವು. ಪ್ರಮುಖರಾದ ಹನುಮಂತಪ್ಪ ಮನ್ನಾಪುರ, ಗುಂಡಪ್ಪ ನಾಯಕ, ಪ್ರಭು ದೊರೆ, ಮಾದೇವಪ್ಪಗೌಡ, ರತ್ನಾಕರ್, ಶಿವಪುತ್ರ ಉಪ್ಪಾರ, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಟಿ.ಜಯರಾಜ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಇದ್ದರು. 
ಜಿಲ್ಲೆ

ಸಸಿಗಳಿಗೆ ನೀರು ಹಾಕಲು ನಿರ್ಲಕ್ಷ್ಯ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ತಾಲೂಕಿನ ವಿವಿಧೆಡೆ ಅರಣ್ಯ ಇಲಾಖೆಯಿಂದ ಸಸಿ ನೆಡಲಾಗಿದ್ದು, ಸಂರಕ್ಷಣೆ ಮಾಡದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಆರೋಪಿಸಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ದೇವದುರ್ಗ ಪರಿಸರ ಪ್ರೇಮಿಗಳ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಂಟಿಯಾಗಿ ಬುಧವಾರ ಮನವಿ ಸಲ್ಲಿಸಿದವು.

ಸಾಮಾಜಿಕ ವಲಯ ಅರಣ್ಯ ಇಲಾಖೆಯ ವಿವಿಧ ಯೋಜನೆ ಹಾಗೂ ನರೇಗಾ ಯೋಜನೆಯಡಿ ಲಕ್ಷಾಂತರ ರೂ. ಖರ್ಚುಮಾಡಿ ಸಸಿಗಳನ್ನು ನೆಡಲಾಗಿದೆ. ವಿಪರೀತ ತಾಪಮಾನದಿಂದ ನೀರಿಲ್ಲದೆ ಸಸಿಗಳು ಒಣಗುತ್ತಿವೆ. ವಲಯ ಅರಣ್ಯ ಅಧಿಕಾರಿಗಳು ನೀರು ಪೂರೈಕೆ ಹಾಗೂ ಸಂರಕ್ಷಣೆ ಮಾಡುವುದರಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಹೀಗಾಗಿ ದೇವದುರ್ಗ, ಅರಕೇರಾ, ಗಬ್ಬೂರು ಹಾಗೂ ಜಾಲಹಳ್ಳಿ ಕಾಯ್ದಿಟ್ಟ ಅರಣ್ಯದಲ್ಲಿ ನೆಟ್ಟಿರುವ ಸಸಿಗಳು ನೀರಿಲ್ಲದೆ ಹಾಳಾಗಿವೆ ಎಂದು ದೂರಿದರು.

ಸಸಿಗಳಿಗೆ ನಿತ್ಯ ನೀರು ಹಾಕಬೇಕು. ಅರಣ್ಯ ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿವ ನೀರು, ಆಹಾರದ ವ್ಯವಸ್ಥೆ ಮಾಡಲು ಪ್ರಾದೇಶಿಕ ಅರಣ್ಯ ಇಲಾಖೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.