ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಭಗೀರಥ ಮಹರ್ಷಿ ಭಾವಚಿತ್ರ ಮೆರವಣಿಗೆ ನಡೆಯಿತು. ಸಮಾಜದ ತಾಲೂಕಾಧ್ಯಕ್ಷ ಭೀಮಣ್ಣ ಬುದ್ದಿನ್ನಿ, ಮುಖಂಡರಾದ ಯಂಕೋಬ ಪೂಜಾರಿ, ರಂಗಪ್ಪ ಪೂಜಾರಿ, ಮುದ್ದಪ್ಪ ಬಂಡಿ, ಗಿರಿಯಪ್ಪ ಪೂಜಾರಿ, ಚನ್ನಪ್ಪ ಅಂದೇಲಿ, ಸುರೇಶ ಪೂಜಾರಿ, ಮೌನೇಶ ದೇಸಾಯಿ ಇತರರಿದ್ದರು. 
ಜಿಲ್ಲೆ

ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಪ್ರತಿಯೊಂದು ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣ ಹಾಗೂ ಸಂಘಟನೆಯೇ ಪ್ರಮುಖ ಅಸ್ತ್ರ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಉಪ್ಪಾರ ಸಮಾಜದ ತಾಲೂಕಾಧ್ಯಕ್ಷ ಭೀಮಣ್ಣ ಬುದ್ದಿನ್ನಿ ಹೇಳಿದರು.

ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ಉಪ್ಪಾರ ಸಮುದಾಯದಿಂದ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಉಪ್ಪಾರ ಸಮುದಾಯ ಕಾಯಕವನ್ನೇ ನಂಬಿಕೊಂಡು ಜೀವನ ನಡೆಸುತ್ತಿದೆ. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಸಮುದಾಯ ಮುಖ್ಯವಾಹಿನಿಗೆ ಬರಲು ಶಿಕ್ಷಣ ಒಂದೇ ಮಾರ್ಗವಾಗಿದೆ ಎಂದರು.

ಮಹರ್ಷಿ ಭಗೀರಥ ಮಹಾನ್ ದೈವಭಕ್ತರಾಗಿದ್ದು, ಬರ ಹಾಗೂ ಜನರ ದಾಹ ನೀಗಿಸಲು ಭಕ್ತಿಯಿಂದಲೇ ಭೂಮಿಗೆ ಗಂಗೆಯನ್ನು ತಂದರು. ಸಮುದಾಯಕ್ಕೆ ಶರಣರು, ಸಂತರು ಮಹಾನ್ ಕೊಡುಗೆ ನೀಡಿದ್ದು, ಅವರು ತೋರಿದ ಮಾರ್ಗದಲ್ಲಿ ಎಲ್ಲರೂ ನಡೆದಾಗ ಅಭಿವೃದ್ಧಿ ಸಾಧ್ಯ ಎಂದು ಭೀಮಣ್ಣ ಬುದ್ದಿನ್ನಿ ಹೇಳಿದರು.

ಲಕ್ಷ್ಮೀರಂಗನಾಥ ದೇವಸ್ಥಾನದಿಂದ ಭಗೀರಥ ವೃತ್ತದವರೆಗೆ ಮಹರ್ಷಿ ಭಗೀರಥ ಅವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮನಸಗಲ್ ರಂಗನಾಥಸ್ವಾಮಿ ದೇವಸ್ಥಾನದ ಅರ್ಚಕ ಗಂಗಪ್ಪಯ್ಯ ತಾತ, ಯಂಕೋಬ ಪೂಜಾರಿ, ರಂಗಪ್ಪ ಪೂಜಾರಿ, ಮುದ್ದಪ್ಪ ಬಂಡಿ, ಗಿರಿಯಪ್ಪ ಪೂಜಾರಿ, ಚನ್ನಪ್ಪ ಅಂದೇಲಿ, ಸುರೇಶ ಪೂಜಾರಿ, ಮೌನೇಶ ದೇಸಾಯಿ, ರಾಜಾ ವಾಸುದೇವ ನಾಯಕ, ಶಂಕರಗೌಡ ಪಾಟೀಲ್, ನರಸಣ್ಣ ನಾಯಕ, ರಮೇಶ ಅನ್ವರಿ, ಯಲಪ್ಪ ಚಪ್ಪಳಕಿ ಇತರರಿದ್ದರು.