ಜಿಲ್ಲೆ

ಕೋರ್ಟ್ ಕಟ್ಟಡ ಕಾಮಗಾರಿಗೆ ಶೀಘ್ರ ಚಾಲನೆ; ಶಾಸಕ ಕೆ.ಶಿವನಗೌಡ ನಾಯಕ ಹೇಳಿಕೆ

Raichur

ದೇವದುರ್ಗ: ಪಟ್ಟಣ ಹೊರವಲಯದಲ್ಲಿ ನ್ಯಾಯಾಲಯ ಕಟ್ಟಡ ಕಾಮಗಾರಿಗೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಪಟ್ಟಣದ ವಕೀಲರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ವಕೀಲರ ಮತ್ತು ಕಕ್ಷಿದಾರರ ಹಲವು ದಿನಗಳ ಬೇಡಿಕೆಯಂತೆ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 16 ಕೋಟಿ ರೂ. ಬಿಡುಗಡೆಗೊಂಡಿದೆ. ಈಗಾಗಲೇ ಟೆಂಡರ ಪ್ರಕ್ರಿಯೆ ಮುಗಿದಿದೆ. ನ್ಯಾಯಾಂಗದ ಶಿಷ್ಟಾಚಾರದಂತೆ ಶಂಕುಸ್ಥಾಪನೆ ನೆರವೇರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ವಕೀಲರ ಬೇಡಿಕೆಗೆ ಅನುಗುಣವಾಗಿ ಪಟ್ಟಣದಲ್ಲಿ ಹೆಚ್ಚುವರಿ ಸಿವಿಲ್ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯದ ಮಂಜೂರಾತಿ ಕುರಿತಂತೆ ರಾಜ್ಯದ ಸರ್ಕಾರದ ಕಾನೂನು ಸಚಿವರೊಂದಿಗೆ ಮಾತನಾಡಿದ್ದೇನೆ. ಇಲ್ಲಿನ ವ್ಯಾಜ್ಯಗಳು, ಜನಸಂಖ್ಯೆ ಹಾಗೂ ಇತರ ವಿವಿಧ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಶಿವನಗೌಡ ನಾಯಕ ಹೇಳಿದರು.