ಜಿಲ್ಲೆ

ದೇವದುರ್ಗದಲ್ಲಿ ಆರು ಪೊಲೀಸರಿಗೆ ತಾಕಿದ ಸೋಂಕು

Raichur

ದೇವದುರ್ಗ: ಮಹಾಮಾರಿ ಕರೊನಾ ಎರಡನೇ ಅಲೆ ತಾಲೂಕನ್ನು ಬೆಂಬಿಡದೆ ಕಾಡುತ್ತಿದೆ. ಶನಿವಾರ ಒಂದೇ ದಿನ 136 ಹೊಸ ಕೋವಿಡ್-19 ಕೇಸ್‌ಗಳು ಪತ್ತೆಯಾಗಿವೆ. ಇವರಲ್ಲಿ ಆರು ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ.

ವಿವಿಧಡೆ ಕರ್ತವ್ಯಕ್ಕೆ ತೆರಳಿದ್ದಾಗ ಸೋಂಕು ತಗಲಿರುವ ಆತಂಕವಿದೆ. ಪಟ್ಟಣದ ಸಂಚಾರಿ ಠಾಣೆಯ ಮೂವರು ಪೊಲೀಸರು ಹಾಗೂ ಸಿವಿಲ್ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಎಲ್ಲಾ ಸಿಬ್ಬಂದಿಯನ್ನು ಆರೋಗ್ಯ ಇಲಾಖೆ ಸಲಹೆ ಮೇರೆಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇತ್ತೀಚೆಗೆ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರೊನಾ ತಪಾಸಣೆ ಮಾಡಿಸಲಾಗಿದೆ.

ಇದಲ್ಲದೆ ತಾಲೂಕಿನ ವಿವಿಧಡೆ 136 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ನಾಲ್ಕು ನೂರು ಗಡಿದಾಟಿದೆ. ಇದು ತಾಲೂಕು ಆಡಳಿತವನ್ನು ಬೆಚ್ಚಿ ಬೀಳಿಸಿದ್ದು, ಕರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಂಕಿತ ಬಹುತೇಕರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ದಿನೇದಿನೆ ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷ ದಾಖಲೆ ಪ್ರಮಾಣದ 1450 ಪ್ರಕರಣಗಳು ಪತ್ತೆಯಾಗಿದ್ದವು. ಈಗ ನಿತ್ಯ ನೂರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿರುವ ಕಾರಣ ಹಳೆಯ ದಾಖಲೆ ಮುರಿಯುವ ಆತಂಕ ಎದುರಾಗಿದೆ.

ಪೊಲೀಸ್ ಇಲಾಖೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ಕರೊನಾ ತಪಾಸಣೆ ನಡೆಸಲಾಗಿದೆ. ಅದರಲ್ಲಿ ಮೂವರು ಸಂಚಾರ ಠಾಣೆ ಸಿಬ್ಬಂದಿ ಹಾಗೂ ಮೂವರು ಸಿವಿಲ್ ಸಿಬ್ಬಂದಿಗೆ ಸೋಂಕು ತಗುಲಿದೆ. ಸದ್ಯ ಅವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತ್ತಿದೆ.
ಹನುಮಂತ್ರಾಯ ಸಣ್ಣಮನಿ
ಪಿಐ ದೇವದುರ್ಗ