ದೇವದುರ್ಗದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಉದ್ಘಾಟಿಸಿದರು. ಬಸವ ಕೇಂದ್ರದ ಗೌರವಾಧ್ಯಕ್ಷ ಭಾನುಪ್ರಕಾಶ ಖೇಣೇದ್, ಮುಖಂಡರಾದ ಗುಂಡಪ್ಪ ದಿಗ್ಗಿ, ದೇವರಾಜ ಯಲಿ, ಮಹಾದೇವಪ್ಪಗೌಡ ಗಣೇಕಲ್, ಮಹಿಳಾ ಘಟಕದ ಅಧ್ಯಕ್ಷೆ ಸೂಗಮ್ಮ ಗದ್ಗಿ, ರೇಖಾ ಪ್ರಕಾಶ ಪಾಟೀಲ್ ಇತರರಿದ್ದರು. 
ಜಿಲ್ಲೆ

ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ ಸಾಧ್ಯ, ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಸಲಹೆ

ಕುರುವತ್ತಿ ಶ್ರೀಕಾಂತಪ್ಪ

ದೇವದುರ್ಗ: ಯಾವುದೇ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬಂದು ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯಗತ್ಯ. ಪ್ರತಿಯೊಬ್ಬರೂ ಸುಶಿಕ್ಷಿತರಾಗಿ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದು ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಹೇಳಿದರು.

ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಬಣಜಿಗ ಸಮುದಾಯ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಬಣಜಿಗ ಸಮುದಾಯ ಕಾಯಕದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ. ಸಮುದಾಯದ ಮುಖಂಡರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದರು.

ಸ್ಪಧಾರ್ತ್ಮಕ ಯುಗದಲ್ಲಿ ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಹಿಂದೆ ಇದ್ದಂತೆ ವ್ಯಾಪಾರ ಧರ್ಮ, ಕಾಯಕ ನಿಷ್ಠೆ ತಮ್ಮ ಆಯಾಮ ಬದಲಾಯಿಸಿಕೊಂಡಿವೆ. ಕಾಲಕ್ಕೆ ತಕ್ಕಂತೆ ಸಮುದಾಯದ ಮುಖಂಡರು ಬದಲಾಗಬೇಕಿದೆ. ಜೀವನಕ್ಕೆ ಅಗತ್ಯ ಸೌಲಭ್ಯ ಪಡೆಯಲು ಒಗ್ಗಟ್ಟಾಗಿ ಸಾಗಬೇಕಿದೆ. ಅಕ್ಷರ ಜ್ಞಾನ ಒಗ್ಗಟಿನ ಅರಿವು ಮೂಡಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಅನಕ್ಷರತೆ ತೊಲಗಿಸಬೇಕಿದೆ ಎಂದರು.

ಬಸವ ಕೇಂದ್ರದ ಗೌರವಾಧ್ಯಕ್ಷ ಭಾನುಪ್ರಕಾಶ ಖೇಣೇದ್, ಮುಖಂಡರಾದ ಗುಂಡಪ್ಪ ದಿಗ್ಗಿ, ದೇವರಾಜ ಯಲಿ, ಮಹಾದೇವಪ್ಪಗೌಡ ಗಣೇಕಲ್, ಬಸವರಾಜಪ್ಪ ಬಂಡೆಗುಡ್ಡ, ಮಹಿಳಾ ಘಟಕದ ಅಧ್ಯಕ್ಷೆ ಸೂಗಮ್ಮ ಗದ್ಗಿ, ರೇಖಾ ಪ್ರಕಾಶ ಪಾಟೀಲ್, ಬಸವೇಶ ಹುಗ್ಗಿ, ಬಸವರಾಜ ಯಾಟಗಲ್, ಸಂಗಮೇಶ ಹರವಿ, ಶರಣಬಸವ, ಶರಣಪ್ಪ ಕೋರಿ, ಪ್ರವೀಣ್‌ಕುಮಾರ, ವಿನಯಕುಮಾರ ಇತರರಿದ್ದರು.