ದೇವದುರ್ಗ ತಾಲೂಕು ಬೂದಿನಾಳ ಗ್ರಾಮದಲ್ಲಿ ಪೊಲೀಸರು ಗಾಂಜಾ ಬೆಳೆಯುತ್ತಿದ್ದ ಸಿದ್ದಯ್ಯ ಪೂಜಾರಿಯನ್ನು ಸೋಮವಾರ ಬಂಧಿಸಿ ಗಾಂಜಾ ಜಪ್ತಿ ಮಾಡಿರುವುದು. 
ಜಿಲ್ಲೆ

ಗಾಂಜಾ ಬೆಳೆಗಾರ ಬಂಧನ

ದೇವದುರ್ಗ: ಬೂದಿನಾಳ ಗ್ರಾಮದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗಬ್ಬೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬೂದಿನಾಳದ ಸಿದ್ದಯ್ಯ ಪೂಜಾರಿ ಬಂಧಿತ. ಹೊಲದಲ್ಲಿ ಹತ್ತಿಯೊಂದಿಗೆ ಗಾಂಜಾ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದ. 1.49 ಕೆಜಿ ಒಣ ಗಾಂಜಾ, 760 ಗ್ರಾಮ್ ಗಾಂಜಾ ಗಿಡಗಳು ಮತ್ತು 2750 ರೂ. ವಶಕ್ಕೆ ಪಡೆಯಲಾಗಿದೆ.