ಅಪಘಾತದಲ್ಲಿ ನಜ್ಜುಗುಜ್ಜಾದ ಬೊಲೆರೋ ವಾಹನ. 
ಜಿಲ್ಲೆ

ಬೊಲೆರೋ ಪಲ್ಟಿಯಾಗಿ ಆರು ಜನರಿಗೆ ಗಾಯ

ಶಾಮಸುಂದರ್ ಕೊಪ್ಪಳಕರ್

ದೇವದುರ್ಗ: ಪಟ್ಟಣದ ಗೌರಂಪೇಟೆ ಏರಿಯಾದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿಯಾಗಿ ಆರು ಜನ ಕಾರ್ಮಿಕರು ಗಾಯಗೊಂಡಿದ್ದಾರೆ.

ಕೆ.ಇರಬಗೇರಾ ಗ್ರಾಮದ ರಂಗಪ್ಪ, ರಾಮನಗೌಡ, ರಮೇಶ, ಗೋಪಾಲ್ ಎನ್ನುವರು ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಆಟೋಗೆ ಬೊಲೆರೋ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ವಾಹನ ಪಲ್ಟಿಯಾಗಿದೆ.