ಅರಕೇರಾ ತಾಲೂಕಿನ ಎಂಟು ಗ್ರಾಪಂಗಳನ್ನು ದೇವದುರ್ಗ ತಾಲೂಕಿನಲ್ಲಿಯೇ ಮುಂದುವರಿಸಲು ಸದನದಲ್ಲಿ ಧ್ವನಿ ಎತ್ತುವಂತೆ ದೇವದುರ್ಗದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕಗೆ ಹೋರಾಟಗಾರರು ಮನವಿ ಸಲ್ಲಿಸಿದರು. ಗೌರವಾಧ್ಯಕ್ಷ ಅಮರೇಶಪ್ಪಗೌಡ ಪೊಪಾ, ತಾಲೂಕು ಅಧ್ಯಕ್ಷ ಗೋವಿಂದರಾಜ್ ನಾಯಕ, ಸಿದ್ದನಗೌಡ ಪಾಟೀಲ್ ಮೂಡಲಗುಂಡ, ಶರಣಗೌಡ ಸುಂಕೇಶ್ವರಹಾಳ ಇತರರಿದ್ದರು. 
ಜಿಲ್ಲೆ

ಗ್ರಾಪಂಗಳು ದೇವದುರ್ಗದಲ್ಲಿಯೇ ಮುಂದುವರಿಯಲಿ

ಶ್ರೀನಾಥ

ದೇವದುರ್ಗ: ಅರಕೇರಾ ತಾಲೂಕಿಗೆ ಅವೈಜ್ಞಾನಿಕವಾಗಿ ಸೇರ್ಪಡೆಯಾದ ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಕೈಬಿಟ್ಟು ಮೊದಲಿನಂತೆ ದೇವದುರ್ಗ ತಾಲೂಕಿನಲ್ಲಿ ಮುಂದುವರಿಸಲು ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ಶಾಸಕಿ ಕರೆಮ್ಮ ಜಿ.ನಾಯಕಗೆ ‘ದೇವದುರ್ಗ ತಾಲೂಕಿನಲ್ಲಿ ಉಳಿವಿಗಾಗಿ ಹೋರಾಟ ಸಮಿತಿ’ ಬುಧವಾರ ಮನವಿ ಸಲ್ಲಿಸಿತು.

ಹಿಂದಿನ ಸರ್ಕಾರ ಅರಕೇರಾವನ್ನು ತಾಲೂಕು ಮಾಡುವಾಗ ದೇವದುರ್ಗ ತಾಲೂಕಿನ ಜನರ ಅಭಿಪ್ರಾಯ ಕೇಳದೆ ಮತ್ತು ಸಾಧಕ-ಬಾಧಕಗಳನ್ನು ಚರ್ಚಿಸದೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಅವೈಜ್ಞಾನಿಕವಾಗಿ ಹಲವು ಹಳ್ಳಿಗಳು ಅರಕೇರಾ ತಾಲೂಕಿಗೆ ಸೇರ್ಪಡೆಯಾಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಅರಕೇರಾ ತಾಲೂಕು ರಚನೆ ವಿರೋಧಿಸಿ ನಿರಂತರ ಹೋರಾಟ ನಡೆಸಿದರೂ ಸರ್ಕಾರ ಗಣನೆಗೆ ತೆಗೆದುಕೊಳ್ಳದೇ ತಾಲೂಕು ರಚಿಸಿದೆ. ಅರಕೇರಾ ತಾಲೂಕಿಗೆ ರಾಮದುರ್ಗ, ಹೊಸೂರು ಸಿದ್ದಾಪೂರ, ಮಲದಕಲ್, ಪಲಕನಮರಡಿ, ಕೊತ್ತದೊಡ್ಡಿ, ಸೋಮನಮರಡಿ, ಗಾಣಧಾಳ, ಮುಂಡರಗಿ ಸೇರಿ ಹಲವು ಗ್ರಾಪಂ ಸೇರಿಸಿದ್ದರಿಂದ ರೈತರು ಕೂಲಿಕಾರರು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮದುರ್ಗ, ಹೊಸೂರು ಸಿದ್ದಾಪುರ, ಮಲದಕಲ್, ಪಲಕನಮರಡಿ, ಕೊತ್ತದೊಡ್ಡಿ, ಸೋಮನಮರಡಿ, ಗಾಣಧಾಳ ಮತ್ತು ಮುಂಡರಗಿ ಗ್ರಾಪಂ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ದೇವದುರ್ಗಕ್ಕೆ ಸೇರಲು ಠರಾವು ಪಾಸ್ ಮಾಡಿವೆ. ಅದರ ಪ್ರಕಾರ ಆ ಗ್ರಾಪಂಗಳನ್ನು ದೇವದುರ್ಗದಲ್ಲೆ ಮುಂದುವರಿಸಬೇಕು. ಈ ಬಗ್ಗೆ ಅಧಿವೇಶದಲ್ಲಿ ಧ್ವನಿ ಎತ್ತಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.

ಗೌರವಾಧ್ಯಕ್ಷ ಅಮರೇಶಪ್ಪಗೌಡ ಪೊಪಾ, ತಾಲೂಕು ಅಧ್ಯಕ್ಷ ಗೋವಿಂದರಾಜ್ ನಾಯಕ, ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಮೂಡಲಗುಂಡ, ಪ್ರಧಾನ ಕಾರ್ಯದರ್ಶಿ ಶರಣಗೌಡ ಸುಂಕೇಶ್ವರಹಾಳ, ಪ್ರಮುಖರಾದ ಬಸನಗೌಡ ದೇಸಾಯಿ, ಹನುಮಂತ್ರಾಯ ಚಿಂತಲಕುಂಟ, ಶರಣಗೌಡ ಕಮಲದಿನ್ನಿ, ಮಲ್ಲಯ್ಯ ಕಟ್ಟಿಮನಿ, ಚನ್ನಪ್ಪ ಮಸೀದಾಪುರ, ಸಾಬಣ್ಣ ಕಮಲದಿನ್ನಿ, ಸಿದ್ದಣ್ಣ ಬಿ.ಗಣೇಕಲ್, ವಸಂತಕುಮಾರ ಸೋಮನಮರಡಿ ರಾಮನಗೌಡ ಜಾಲಹಳ್ಳಿ, ಮರೆಪ್ಪ ಪೂಜಾರಿ, ಗೆಜ್ಜೆಬಾವಿ ಇತರರಿದ್ದರು.