ಸಾವಿರಾರು ಯುವಕರು, ಗ್ರಾಮಸ್ಥರು ಭಾಗಿ
ದೇವದುರ್ಗ: ಅರಕೇರಾ ಹೊಸ ತಾಲೂಕು ರಚನೆಗೆ ಅನುಮೋದನೆ ಖಂಡಿಸಿ ಹಾಗೂ ಅಖಂಡ ದೇವದುರ್ಗ ತಾಲೂಕು ಉಳಿವಿಗಾಗಿ ಇಲ್ಲಿನ ಮಿನಿವಿಧಾನಸೌಧ ಮುಂದೆ ಕೊತ್ತದೊಡ್ಡಿ ಗ್ರಾಮಸ್ಥರು ಹಾಗೂ ಯುವಕರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು ಪಟ್ಟಣದ ಜೆಪಿ ಸರ್ಕಲ್‌ನಲ್ಲಿ ಜಮಾಯಿಸಿ, ಮಿನಿವಿಧಾನಸೌಧದವರೆಗೆ ಬೃಹತ್ ರ‌್ಯಾಲಿ ನಡೆಸಿದರು. ಕೊತ್ತದೊಡ್ಡಿ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತ್ರಾಯ ಚಿಕ್ಕಗುಡ್ಡ ಮಾತನಾಡಿ, ಕ್ಷೇತ್ರದ ಶಾಸಕರು ದೇವದುರ್ಗ ತಾಲೂಕು ಒಡೆಯುತ್ತಿದ್ದಾರೆ. ಇದು ಅಭಿವೃದ್ಧಿಗಾಗಿ ಅಲ್ಲ ಅಧಿಕಾರಕ್ಕಾಗಿ ಒಡೆದಾಳುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹೊಸ ತಾಲೂಕು ರಚಿಸದೆ ಅಖಂಡ ದೇವದುರ್ಗ ತಾಲೂಕು ಉಳಿವಿಗೆ ಸಹಕರಿಸಬೇಕು. ತಾಲೂಕು ಒಡೆದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ನಾಯಕ ಕರೇಮ್ಮ ನಾಯಕ, ಗ್ರಾಮಸ್ಥರಾದ ಕಮಲಮ್ಮ ನಾಯಕ, ಹನುಮಯ್ಯ ಮಾದೆ, ಗೋವಿಂದರಾಜ್ ನಾಯಕ, ಶಿವರಾಜ ಪೂಜಾರಿ, ಬಸವರಾಜ ನಾಯಕ, ಹರ್ಷವರ್ಧನ ಮೇಟಿ, ಎಂ.ಶಿವರಾಜ ನಾಯಕ, ಮಾರೆಪ್ಪ ಭೋವಿ, ಭೀಮಮ್ಮ ದೊಂಡಂಬಳಿ, ಮಲ್ಲಯ್ಯ, ಯಂಕನಗೌಡ, ಭೀಮಪ್ಪ ದಾಸರ್, ರಂಗಪ್ಪ ಮೇಟಿ ಇರರಿದ್ದರು.