ಇಳಕಲ್ಲ ನಗರದ ಸಜ್ಜನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಂಸ್ಕೃತ ದಿನ ಆಚರಣೆ ಕಾರ್ಯಕ್ರಮದಲ್ಲಿ ನಾಗರಾಜ ಕೋಟ್ನಿಸ್ ಮಾತನಾಡಿದರು. ಎಂ.ಎಂ.ಸಜ್ಜನ, ಪ್ರವೀಣ ಸಜ್ಜನ ಇತರರಿದ್ದರು. 
ಜಿಲ್ಲೆ

ದೇವಭಾಷೆಯಲ್ಲಿದೆ ಅಪಾರ ಜ್ಞಾನ

Vijayapura - Desk - Chinnayya Chinnayyanamath

ಇಳಕಲ್ಲ(ಗ್ರಾ): ಸಂಸ್ಕೃತ ಭಾಷೆಯಲ್ಲಿಯ ಅಪಾರ ಜ್ಞಾನದಿಂದಾಗಿ ಅದನ್ನು ಶಾಸ್ತ್ರೀಯ ಸಂಸ್ಕಾರ ಭಾಷೆಯನ್ನಾಗಿ ವಿಶ್ವದ ಅನೇಕ ದೇಶಗಳು ಅಧ್ಯಯನ ಮತ್ತು ಸಂಶೋಧನೆಗೆ ಬಳಸುತ್ತಿವೆ ಎಂದು ನಾಗರಾಜ ಕೋಟ್ನಿಸ್ ಹೇಳಿದರು.

ಇಲ್ಲಿಯ ಸಜ್ಜನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಶಂಭುಲಿಂಗ ಸಂಸ್ಕೃತ ಪಾಠಶಾಲೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಕೃತ ಭಾಷೆಯನ್ನು ಕಲಿಯುವುದರಿಂದ ಇತರ ಭಾಷೆಗಳಲ್ಲೂ ಸಾಕಷ್ಟು ಪ್ರೌಢಿಮೆ ಪಡೆಯಲು ಸಾಧ್ಯ ಎಂದು ಹೇಳಿದರು.

ಎಂ.ಎಂ.ಸಜ್ಜನರ ಮಾತನಾಡಿ, ಕನ್ನಡ ಮತ್ತು ಸಂಸ್ಕೃತ ಭಾಷೆಯ ಅವಿನಾಭಾವ ಸಂಬಂಧ ಮತ್ತು ಮಹತ್ವದ ಬಗ್ಗೆ ಗಮನ ಸೆಳೆದರು.
ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಚನ್ನಗೌಡರ ಮಾತನಾಡಿ, ಸಂಸ್ಕೃತ ಕಲಿಯುವುದರಿಂದಾಗುವ ಪ್ರಯೋಜನಗಳನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎಂ.ಎಸ್.ಸಜ್ಜನ ಮಾತನಾಡಿ, ಸಂಸ್ಕೃತ ಪುರಾತನ ದೇವ ಭಾಷೆಯಾಗಿದ್ದು, ಎಲ್ಲಾ ಭಾಷೆಗಳ ತಾಯಿಭಾಷೆಯಾಗಿದೆ. ಅಧ್ಯಯನ ಮಾಡುವ ಮೂಲಕ ಹೆಚ್ಚಿನ ಜ್ಞಾನಾರ್ಜನೆ ಪಡೆದುಕೊಂಡು ದೇಶದ ಪತಾಕೆ ಹಾರಿಸಿ ಭಾರತ ವಿಶ್ವಗುರುವಾಗಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು. ಪ್ರವೀಣ ಸಜ್ಜನ ಕಾರ್ಯಕ್ರಮ ನಡೆಸಿಕೊಟ್ಟರು.