ರಾಯಚೂರಿನ ಸೇವಾ ಪಿಯು ಕಾಲೇಜಿನಲ್ಲಿ ಈಶಾನ್ಯ ಪದವೀಧರ ಕ್ಷೇತ್ರ ಮತದಾರರ ನೋಂದಣಿ ಅಭಿಯಾನದ ಬಗ್ಗೆ ನಗರದ ವಿವಿಧ ಶಿಕ್ಷಣ ಕಾಲೇಜುಗಳ ಪ್ರಾಚಾರ್ಯರು ಶುಕ್ರವಾರ ಸಮಾಲೋಚನೆ ಸಭೆ ನಡೆಸಿದರು. ಪ್ರಾಚಾರ್ಯರಾದ ಡಾ.ವಿಜಯಕುಮಾರ ಕಟ್ಟಿಮನಿ, ಡಾ.ಅರುಣಾಕುಮಾರಿ, ಡಾ.ಉಮಾಕಾಂತ ದೇವರಮನಿ, ಡಾ.ಅಶ್ವಿನಿಕುಮಾರ, ಡಾ.ಸಿದ್ರಮಯ್ಯ ಹಿರೇಮಠ, ಡಾ.ತಿಮ್ಮಯ್ಯ ಶೆಟ್ಟಿ, ಡಾ.ಶ್ರೀನಿವಾಸ ರಾಯಚೂರಕರ್ ಇದ್ದರು. 
ಜಿಲ್ಲೆ

ಮತದಾರರ ನೋಂದಣಿ ಅಭಿಯಾನ ಯಶಸ್ವಿಗೆ ಸಂಕಲ್ಪ

ರಾಚಯ್ಯ ಸ್ವಾಮಿ

ರಾಯಚೂರು: ಮುಂಬರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ನೋಂದಣಿ ಅಭಿಯಾನವನ್ನು ಯಶಸ್ವಿಗೊಳಿಸಲು ನಗರದ ವಿವಿಧ ಶಿಕ್ಷಣ ಮಹಾವಿದ್ಯಾಲಯಗಳ ಪ್ರಾಚಾರ್ಯರು ಸಂಕಲ್ಪ ಮಾಡಿದರು.
ನಗರದ ಸೇವಾ ಪಿಯು ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪ್ರಾಚಾರ್ಯರ ಸಭೆಯಲ್ಲಿ ಸಮಾಲೋಚನೆ ನಡೆಸಿ ಕಾಲೇಜುಗಳ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಲು ನಿರ್ಧರಿಸಲಾಯಿತು.
ಗುಲ್ಬರ್ಗ ವಿವಿ ಮಾಜಿ ಸಿಂಡಿಕೆಟ್ ಸದಸ್ಯ ಡಾ.ಶರಣಬಸವ ಪಾಟೀಲ್ ಜೋಳದೆಡಗಿ ಮಾತನಾಡಿ, ಪ್ರತಿ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನೋಂದಣಿಯಾಗುತ್ತಿರುವುದನ್ನು ಮನಗಂಡು ಜಿಲ್ಲಾಡಳಿತ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಎಲ್ಲ ಕಾಲೇಜುಗಳ ಸಹಯೋಗದೊಂದಿಗೆ ನೋಂದಣಿ ಅಭಿಯಾನ ಆರಂಭಿಸಿದ್ದು, ಎಲ್ಲರೂ ಅದಕ್ಕೆ ಕೈಜೋಡಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ನೋಂದಣಿ ಮಾಡಿದರೆ ಮಾತ್ರ ರಾಜಕೀಯ ಪಕ್ಷಗಳು ಜಿಲ್ಲೆಯವರಿಗೆ ಟಿಕೆಟ್ ನೀಡಲು ಮುಂದೆ ಬರುತ್ತವೆ ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಶಿಕ್ಷಣ ಕಾಲೇಜುಗಳ ಪ್ರಾಚಾರ್ಯರಾದ ಡಾ.ವಿಜಯಕುಮಾರ ಕಟ್ಟಿಮನಿ, ಡಾ.ಅರುಣಾಕುಮಾರಿ, ಡಾ.ಉಮಾಕಾಂತ ದೇವರಮನಿ, ಡಾ.ಅಶ್ವಿನಿಕುಮಾರ, ಡಾ.ಸಿದ್ರಮಯ್ಯ ಹಿರೇಮಠ, ಡಾ.ತಿಮ್ಮಯ್ಯ ಶೆಟ್ಟಿ, ಡಾ.ಶ್ರೀನಿವಾಸ ರಾಯಚೂರಕರ್, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಸೇವಾ ಸಂಸ್ಥೆ ಅಧ್ಯಕ್ಷ ಪಿ.ಬಸವರಾಜ, ಪ್ರಾಧ್ಯಾಪಕ ಡಾ.ವಿಜಯರಾಜೇಂದ್ರ ಉಪಸ್ಥಿತರಿದ್ದರು.