ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿ ಎ್ಡಿಸಿ ಅನುಪಮಾ ಸಿಂಗ್ ಅವರಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕರವೇ ಅಧ್ಯಕ್ಷ ಆಂಜನೇಯ ಭಂಡಾರಿ, ಕುರುಮೇಶ ನಾಯಕ, ಶಿವು ಪತ್ತಾರ, ಅಶೋಕ ನಾಯಕ, ಸಲೀಂ ಖಾನ್ ಇತರರಿದ್ದರು. 
ಜಿಲ್ಲೆ

ಹದಗೆಟ್ಟ ರಸ್ತೆ ದುರಸ್ತಿಗೆ ಕ್ರಮವಹಿಸಲಿ

ರುದ್ರಪ್ಪ ವಾಲಿ

ಲಿಂಗಸುಗೂರು: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿದ್ದು ಅಪಘಾತ ತಡೆಗಟ್ಟಲು ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಸಹಾಯಕ ಆಯುಕ್ತರ ಕಚೇರಿಯ ಎ್ಡಿಸಿ ಅನುಪಮಾ ಸಿಂಗ್ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಹಲವು ಕಡೆ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 150ಎ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ವಾಹನಗಳ ಅಪಘಾತ ಹೆಚ್ಚಾಗುತ್ತಿವೆ. ಅಮರೇಶ್ವರ ಕ್ರಾಸ್‌ದಿಂದ ಕೋಠಾ ರಸ್ತೆ, ಗುಡದನಾಳ-ಹಟ್ಟಿ, ಗುರುಗುಂಟಾ-ಗೌಡೂರು, ನಾಗರಹಾಳ-ಹಲ್ಕಾವಟಗಿ, ಹನಮಗುಡ್ಡ ಹೊಸೂರು-ಆನೆಹೊಸೂರು, ಗುಂಡಸಾಗರ-ಆನೆಹೊಸೂರು, ಚಿತ್ರನಾಳ-ಮಾವಿನಭಾವಿ ರಸ್ತೆಗಳು ಹಾಳಾಗಿದ್ದು ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ವಾಹನದಲ್ಲಿ ಸಂಚರಿಸುವಾಗ ಗರ್ಭಿಣಿಯರು ತೀವ್ರ ತೊಂದರೆ ಅನುಭವಿಸಬೇಕಾಗುತ್ತಿದೆ.

ಮಾರ್ಗ ಮಧ್ಯ ಹೆರಿಗೆಯಾದ ಪ್ರಸಂಗಗಳೂ ನಡೆದಿವೆ. ಕೂಡಲೇ ತಾಲೂಕು ಆಡಳಿತ ಎಚ್ಚತ್ತುಕೊಂಡು ರಸ್ತೆ ದುರಸ್ತಿಗೆ ಮುಂದಾಗಬೇಕು. ನಿರ್ಲಕ್ಷ ತೋರಿದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಸಲ್ಲಿಸಲಾಯಿತು.

ಪ್ರಮುಖರಾದ ಭೀಮೇಶ ನಾಯಕ, ಮೌನೇಶ ಬುಳ್ಳಾಪುರ, ವಿಜಯಕುಮಾರ, ಪ್ರೇಮಕುಮಾರ ಪಾಟೀಲ, ರವಿ ಕುಮಾರ ಜೋಗೇರ, ಅಭಿಷೇಕ ನಾಯಕ, ಸಿದ್ದು ಛಲುವಾದಿ ಇತರರಿದ್ದರು.