ಆನೇಕಲ್: ಚಪ್ಪರ ಬದನೆಕಾಯಿ ಬೆಳೆದಿದ್ದ ರೈತ ಬೆಳೆ ಚೆನ್ನಾಗಿ ಬರಲಿ ಎಂದು ಸಿಂಪಡಣೆ ಮಾಡಿದ ಔಷಧದಿಂದ ಇಡೀ ತೋಟದಲ್ಲಿನ ಬೆಳೆ ನಾಶವಾಗಿದೆ.
ಸುರಗಜಕ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿಡಿ ಹೊಸಕೋಟೆಯ ರೈತ ಯುವರಾಜು ಒಂದೂವರೆ ಎಕರೆಯಲ್ಲಿ ಚಪ್ಪರದ ಬದನೆಕಾಯಿ ಬೆಳೆದಿದ್ದು, ಬೆಳೆ ಕೂಡ ಚೆನ್ನಾಗಿ ಬಂದಿತ್ತು, ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 30 ರೂಪಾಯಿಗೂ ಹೆಚ್ಚು ಬೆಲೆ ಇತ್ತು. ಸಲು ಹಾಳಾಗದೆ ಚೆನ್ನಾಗಿರಲಿ ಎಂದು ಖಾಸಗಿ ಕಂಪನಿಯ ಔಷಧ ತಂದು ಸಿಂಪಡಣೆ ಮಾಡಿದ್ದು, ಔಷಧ ಸಿಂಪಡಿಸಿದ ಮೇಲೆ ಬೆಳೆ ನಾಶವಾಗಿದೆ. ಚಪ್ಪರದ ಬದನೆ ಮೇಲೆ ಬಿಳಿ ಬಣ್ಣದಂತೆ ಬೂದಿ ಕಟ್ಟಿಕೊಂಡು ಕಾಯಿಸುಟ್ಟು ಹೋಗುತ್ತಿದ್ದು, ಗಿಡಗಳು ದಿನೇದಿನೆ ಬಾಡಿ ಹೋಗುತ್ತಿವೆ. ಲಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಹಾಳಾಗುತ್ತಿದೆ ಎಂದು ರೈತ ಕಂಗಾಲಾಗಿದ್ದಾನೆ. ಔಷಧ ಕೊಟ್ಟ ಅಂಗಡಿಯ ಮಾಲೀಕನನ್ನು ಪ್ರಶ್ನೆ ಮಾಡಿದಾಗ ಆತ ಸರಿಯಾದ ಮಾಹಿತಿ ಕೊಡಲಿಲ್ಲ. ಕಳೆನಾಶಕ ಕಂಪನಿಯವರಿಗೆ ಕರೆ ಮಾಡಿದರೆ ರ್ನಿಲಕ್ಷ$್ಯದ ಮಾತುಗಳನ್ನು ಆಡುತ್ತಿದ್ದಾರೆ ಎವನ್ನಲಾಗಿದೆ.
ಔಷಧ ತಯಾರು ಮಾಡಿರುವ ಕಂಪನಿಯವರಿಗೆ ಮಾಹಿತಿ ನೀಡಿದ್ದೇವೆ. ತೋಟಕ್ಕೆ ಬಂದು ಪರಿಶೀಲನೆ ಮಾಡಿ ಬಳಿಕ ಇನ್ನೆರಡು ಕಡೆ ಇದೇ ರೀತಿ ಸಿಂಪಡಣೆ ಮಾಡಿ ಏನಾದರೂ ಕೀಟನಾಶಕದಿಂದ ಬೆಳೆ ನಾಶವಾಗಿದ್ದರೆ ಅದಕ್ಕೆ ಪರಿಹಾರ ನೀಡುವ ಭರವಸೆಯನ್ನು ಕಂಪನಿಯವರು ನೀಡಿದ್ದಾರೆ.
ದಿನೇಶ್ ಕೀಟನಾಶಕ ಔಷಧ ಕೊಟ್ಟ ಅಂಗಡಿ ಮಾಲೀಕ
ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಚಪ್ಪರದ ಬದನೆಕಾಯಿ ಒಳ್ಳೆಯ ಬೆಳೆ ಬಂದಿತ್ತು. ಔಷಧ ನಕಲಿ ಇರುವಂತೆ ಕಂಡುಬಂದಿದ್ದು, ಅಂಗಡಿ ಮಾಲೀಕ ಹಾಗೂ ಕಂಪನಿಯವನನ್ನು ಕೇಳಿದರೆ ರ್ನಿಲಕ್ಷದ ಮಾತುಗಳನ್ನು ಆಡುತ್ತಿದ್ದಾರೆ.
ಯುವರಾಜ ರೈತ