ಎನ್.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರು ನನ್ನ ಮಣ್ಣ ನನ್ನ ದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಾಜಿ ಸೈನಿಕರಾದ ಎ.ಗೋಪಲ್, ಎನ್.ಕೆ ವಿಜಯ, ರಮೇಶ್ ಶಾಸ್ತ್ರಿ, ಎ.ಎನ್. ಸುಬ್ಬಣ್ಣ, ಸಂದೀಪ್ ಬಿ.ಎಂ ಇದ್ದರು. 
ಜಿಲ್ಲೆ

ಹವಾಮಾನ ಬದಲಾಣೆಯಿಂದ ವಿನಾಶ

ಜಿ.ಹೆಚ್. ಧನ್ಯಕುಮಾರ್

ಕೊಪ್ಪ: ನೆಲ, ಜಲ ಸಂರಕ್ಷಿಸುವ ಮೂಲಕ ನಾವು ದೇಶಪ್ರೇಮ ತೋರಿಸೋಣ ಎಂದು ಸಹಾಯಕ ನಿರ್ದೇಶಕ ಕೆ.ಜಿ.ಚೇತನ್ ತಿಳಿಸಿದರು.
ಬಾಳಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನನ್ನ ಮಣ್ಣ ನನ್ನ ದೇಶ ಅಭಿಯಾನದಡಿ ಅಮೃತ ಕಲಶ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನು ಹವಾಮಾನ ಬದಲಾವಣೆ ಮಾಡುತ್ತಿದ್ದಾನೆ. ಇದು ವಿನಾಶದ ಅಂಚಿಗೆ ತೆಗೆದುಕೊಂಡು ಹೋಗುತ್ತಿದ್ದು, ನಾವು ಭೂಮಿಯನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ದೇಶದ ಗಡಿಯಲ್ಲಿ ಮಣ್ಣಿಗಾಗಿ ರಕ್ತ ಹರಿಸಿದ ಯೋಧರನ್ನು ಸನ್ಮಾನಿಸುತಿದ್ದೇವೆ. ನಾವು ನಮ್ಮ ದೇಶ ಮಣ್ಣು ಮತ್ತು ಪ್ರಕೃತಿಯನ್ನು ಉಳಿಸಲು ಬೆವರು ಸುರಿಸಿದರೆ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಾರ್ಥಕವಾಗುತ್ತದೆ ಎಂದರು.
ಮಾಜಿ ಸೈನಿಕರಾದ ಎ.ಗೋಪಲ್, ಎನ್.ಕೆ ವಿಜಯ, ರಮೇಶ್ ಶಾಸ್ತ್ರಿ, ಎ.ಎನ್.ಸುಬ್ಬಣ್ಣ, ಬಿ.ಎಂ.ಸಂದೀಪ್ ಅವರನ್ನು ಸನ್ಮಾನಿಸಲಾಯಿತು. ತಾಪಂ ಇಒ ಪುಟ್ಟೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಭಾರ ಪ್ರಾಚಾರ್ಯ ಎಸ್.ಡಿ.ಸತೀಶ್ ಇದ್ದರು.