ಮಾಗಡಿ : ಮಾಗಡಿ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಕಾಯ್ದೆಯಡಿ ಉಲ್ಲಂಘನೆಯ 18 ಪ್ರಕರಣಗಳಲ್ಲಿ ಜಪ್ತಿಪಡಿಸಿದ 153 .360 ಲೀಟರ್ ಮಧ್ಯ, 30.250 ಲೀಟರ್ ಬಿಯರ್, 21 ಲೀಟರ್ ಸೇಂದಿ ಹಾಗೂ ಎಂ.ಎಸ್.ಐ.ಎಲ್ ಅಂಗಡಿಗಳಲ್ಲಿ ಅವಧಿ ಮೀರಿದ ಸೇವನೆಗೆ ಯೋಗ್ಯವಲ್ಲದ 105.900 ಲೀಟರ್ ಬಿಯರ್ ಅನ್ನು ನಾಶಪಡಿಸಿದರು.
ತಿರುಮಲೆ ಕಸದ ಘಟಕದ ಬಳಿ ಸರ್ಕಾರದ ನಿಯಮದಂತೆ ಅಬಕಾರಿ ಉಪ ಅಧೀಕ್ಷಕ ಎಂ.ನಟರಾಜ್ ತಾಲೂಕು ಕಚೇರಿಯ ಶಿರಸ್ತೇದಾರ್ ರವಿಕುಮಾರ್, ಅಬಕಾರಿ ನಿರೀಕ್ಷಕ ಎಂ.ನಾರಾಯಣ್, ಚೇತನ್, ಸಿಬ್ಬಂದಿ ಮೋಹನ್ ಕುಮಾರ್, ಹನುಮಂತ ಜಾಲಿಕಟ್ಟಿ, ಶರತ್‌ಕುಮಾರ್ ಹಾಗೂ ವಾಹನ ಚಾಲಕ ಪಾಂಡುರಂಗ ಇವರು ಹಾಜರಿದ್ದು, ನಿಯಮಾನುಸಾರ ಮಧ್ಯವನ್ನು ನಾಶಪಡಿಸಿದರು.