ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜ್ಞಾನ ವಿಕಾಸ ಯೋಜನೆಯಡಿ ನಿರ್ಗತಿಕರ ಮಾಸಾಶನವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಡಿ.ನಿಂಗಪ್ಪ ಅಗಸರ ಫಲಾನುಭವಿ ಈರಮ್ಮ ಅವರಿಗೆ ವಿತರಿಸಿದರು. ಗ್ರಾಪಂ ಅಧ್ಯಕ್ಷೆ ಹನುಮಮ್ಮ, ಸದಸ್ಯ ಬೀರಪ್ಪ, ಪ್ರಮುಖರಾದ ಶಂಕರಗೌಡ ಪಾಟೀಲ್ ಇತರರಿದ್ದರು. 
ಜಿಲ್ಲೆ

ನಿರ್ಗತಿಕ ವೃದ್ಧೆಗೆ ಮಾಸಾಶನ ವಿತರಣೆ

ರುದ್ರಪ್ಪ ವಾಲಿ

ಕನಕಗಿರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಯೋಜನೆಯಡಿ ಬುಧವಾರ ನಿರ್ಗತಿಕರ ಮಾಸಾಶನವನ್ನು ಮುಸಲಾಪುರ ವಲಯದ ಚಿಕ್ಕಮಾದಿನಾಳದ ಫಲಾನುಭವಿ ಈರಮ್ಮ ಅವರಿಗೆ ವಿತರಿಸಲಾಯಿತು.

ಯೋಜನಾಧಿಕಾರಿ ಡಿ.ನಿಂಗಪ್ಪ ಅಗಸರ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥಾಪಕ ಡಾ. ವೀರೇಂದ್ರ ಹೆಗ್ಗಡೆ ಅವರ ಸಹಕಾರದಿಂದ ಮಹಿಳೆಯರ ಸಬಲೀಕರಣಕ್ಕೆ ವಿವಿಧ ಸೌಲಭ್ಯ ನೀಡಿದ್ದಾರೆ.

ಈಗ ನಿರ್ಗತಿಕ ವೃದ್ಧರಿಗೆ ಮಾಸಾಶನ ನೀಡುವ ಸಮಾಜಮುಖಿ ಕಾರ್ಯಕ್ರಮ ಆರಂಭಿಸಿದ್ದು, ವೃದ್ಧರಿಗೆ ಅನುಕೂಲವಾಗಿದೆ ಎಂದರು. ವಲಯ ಮೇಲ್ವಿಚಾರಕ ಯಲ್ಲರೀ ಶಿವಾಜಿ, ಕೃಷಿ ಮೇಲ್ವಿಚಾರಕ ಗಂಗಾಧರ, ತಾಲೂಕು ವಿಚಕ್ಷಣಾಧಿಕಾರಿ ದಿನೇಶ, ಜ್ಞಾನವಿಕಾಸ ಸಮನ್ವಯಧಿಕಾರಿ ಮಂಜುಳಾ, ಸೇವಾ ಪ್ರತಿನಿಧಿ ಹಂಪಮ್ಮ, ವಿಮಲಾಕ್ಷಿ, ವಿಎಲ್‌ಸಿ ಅಂಬರೀಶ ಇತರರಿದ್ದರು.