ತಂಗಡಗಿ: ಚಿತ್ರನಟ ಕಮಲ್ ಹಾಸನ್ ಈಗ ಮೆ ಕೇಳಿದರೂ ಅವರು ನಟಿಸಿರುವ "ಥಗ್ಲೈಫ್' ಚಲನಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಕನ್ನಡ ಮತ್ತು ಸಂಸತಿ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ತಮ್ಮ ಮನೆ ದೇವರು ತಂಗಡಗಿಯ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಮಂಗಳವಾರ ಕುಟುಂಬ ಸಮೇತ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈಗಾಗಲೇ ಅವರಿಗೆ ಮೆ ಕೇಳಲು ಸಾಕಷ್ಟು ಅವಕಾಶ ಕೊಡಲಾಗಿತ್ತಾದರೂ ಸ್ಪಂದಿಸಲಿಲ್ಲ. ಕನ್ನಡಿಗರ, ಕನ್ನಡದ ವಿಚಾರದಲ್ಲಿ ನಾವು ಯಾವುದನ್ನೂ ಸಹಿಸಲ್ಲ. ಈ ಕುರಿತು ಚಲನಚಿತ್ರ ಮಂಡಳಿ ಮತ್ತು ನಿರ್ಮಾಪಕರ ಸಂದವರಿಗೆ ಪತ್ರ ಬರೆದಿದ್ದೇವೆ. ಈ ಬಗ್ಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚಲನಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅನುದಾನ ಬಿಡುಗಡೆಗೆ ಮನವಿ : ತಂಗಡಗಿಯ ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿ, ತಂಗಡಗಿಯ ಶ್ರೀ ಚರಲಿಂಗೇಶ್ವರ ದೇವಸ್ಥಾನ ಸಮಿತಿ, ತಾರನಾಳದ ಶ್ರೀ ದುರ್ಗಾದೇವಿ ದೇವಸ್ಥಾನ ಕಮಿಟಿಯವರು ಸಚಿವರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಆಯಾ ಸ್ಥಳದಲ್ಲಿರುವ ದೇವಸ್ಥಾನಗಳ ಜೀಣೋರ್ದ್ಧಾರ, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವರು ಸ್ಥಳಿಯ ಶಾಸಕ ಸಿ.ಎಸ್. ನಾಡಗೌಡರಿಂದ ಶಿಾರಸು ಪತ್ರ ತಂದಲ್ಲಿ ಅನುದಾನ ಬಿಡುಗಡೆಗೊಳಿಸಿ ಸಹಕರಿಸುವ ಭರವಸೆ ನೀಡಿದರು. ದಂಪತಿ ಸಮೇತ ಸಚಿವರನ್ನು ದುರ್ಗಾದೇವಿ ದೇವಸ್ಥಾನ, ಚರಲಿಂಗೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮಂಜುಳಾ ಬಬಲೇಶ್ವರ, ತಾಲೂಕು ಅಧಿಕಾರಿ ಶಿವಲೀಲಾ ಕೊಣ್ಣೂರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸ್ಥಳಿಯ ಮುಖಂಡರು ಸೇರಿ ಹಲವರು ಪಾಲ್ಗೊಂಡಿದ್ದರು. ಮುದ್ದೇಬಿಹಾಳದಿಂದ ಆಗಮಿಸಿದ್ದ ದಿವಂಗತ ಮಾತೋಶ್ರೀ ನಾಗಮ್ಮ ಭೀಮಪ್ಪ ಬೆಳಗಲ್ಲ ೌಂಡೇಷನ್ ವತಿಯಿಂದ ಅಧ್ಯ ಹಣಮಂತ ಬೆಳಗಲ್ಲ, ಸದಸ್ಯರಾದ ಸಂಗಪ್ಪ ತಂಗಡಗಿ, ಯಮನೂರಿ ತಂಗಡಗಿ ಇನ್ನಿತರರು ಸಚಿವರನ್ನು ಸನ್ಮಾನಿಸಿ ಪುಸ್ತಕ ಕಾಣಿಕೆ ನೀಡಿದರು.