Oplus_16908288 
ಜಿಲ್ಲೆ

ಸಹಕಾರ ಸಂಘ ಸ್ಥಾಪನೆಗೆ ಹಂಬಲ, ಛಲ ಅಗತ್ಯ

ನಂಜನಗೂಡು: ನಗರದ ದೇವಿರಮ್ಮನಹಳ್ಳಿ ಬಡಾವಣೆಯಲ್ಲಿರುವ ಶ್ರೀ ಶರಣ ಸಂಗಮ ಮಠದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ತಾಲೂಕು ಮಟ್ಟದ ಪ್ರವರ್ತಕರ ಸಭೆ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕ ಎಸ್.ಕೆ.ಮಂಜುನಾಥ್, ಸಹಕಾರ ಸಂಘ ಸ್ಥಾಪನೆಗೆ ಹಂಬಲ ಮತ್ತು ಛಲ ಅಗತ್ಯ. ಒಂದು ಸಂಘವನ್ನು ಸ್ಥಾಪನೆ ಮಾಡಿದರೆ ಅದು ಒಬ್ಬರ ಸ್ವತ್ತು ಆಗುವುದಿಲ್ಲ. ಬದಲಾಗಿ ಸಮಾಜದ ಆಸ್ತಿ ಎಂದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, ಸಹಕಾರ ಸಂಸ್ಥೆ ಸ್ಥಾಪಿಸಲು ಸಾಕಷ್ಟು ತೊಡಕು ಇರುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕ್ಷೇತ್ರವನ್ನು ಬಲಪಡಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಗ್ರಾಮೀಣ ಪ್ರದೇಶಗಳನ್ನು ಬಲಿಷ್ಠಗೊಳಿಸಬೇಕೆಂಬುದು ಸರ್ಕಾರದ ಉದ್ದೇಶ. ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಇದ್ದರೆ ಮಾತ್ರ ಸಂಘ ಮತ್ತಷ್ಟು ಬಲಿಷ್ಟಗೊಳ್ಳಲು ಸಾಧ್ಯ ಎಂದರು.

ಸಭೆಯಲ್ಲಿ ಶರಣ ಸಂಗಮ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸೌಹಾರ್ದ ಸಹಕಾರಿ ಸಂಘದ ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಅಭಿವೃದ್ಧಿ ಅಧಿಕಾರಿ ಸುರೇಶ್, ನಂದಿನಿ ಮಹೇಶ್, ಕೋಮಲಾ ಇತರರಿದ್ದರು.