ಜಿಲ್ಲೆ

ಮೈಸೂರಿನಲ್ಲಿ ದೇಸಿರಂಗ ನಾಟಕೋತ್ಸವ

ಮೈಸೂರು: ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಗರದ ಕಿರುರಂಗಮಂದಿರದಲ್ಲಿ ಬುಧವಾರ ದೇಸಿರಂಗ ನಾಟಕೋತ್ಸವ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.

ರಂಗಕರ್ಮಿ ಕೆ.ಜೆ.ನಾರಾಯಣಶೆಟ್ಟಿ ಮಾತನಾಡಿ, ರಂಗ ತರಬೇತಿಯು ಅನೇಕ ಅನುಭವಗಳಿಗೆ ಸಹಕಾರ ನೀಡುತ್ತದೆ. ಆಸಕ್ತಿಯುಳ್ಳವರಿಗೆ ನಾಟಕ ಕ್ಷೇತ್ರವು ಬದುಕಿಗೆ ಉತ್ತಮ ಪಾಠಗಳನ್ನು ನೀಡುತ್ತದೆ ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಸತ್ಯವನ್ನು ತೋರುವ, ಮನುಷ್ಯತ್ವ ಎತ್ತಿಹಿಡಿಯುವ ರಂಗಭೂಮಿ ಇಂದಿನ ತುರ್ತು ಅಗತ್ಯವಾಗಿದೆ. ಸ್ವಸ್ಥ ಸಮಾಜಕ್ಕೆ, ಮೌಲ್ಯ ಜಾಗೃತಿಗೆ ರಂಗ ಚಟುವಟಿಕೆ ಅಗತ್ಯ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ದೇಸಿರಂಗ ಸಂಸ್ಥೆಯ ಕಾರ್ಯದರ್ಶಿ ದಿನಮಣಿ, ಉಪಾಧ್ಯಕ್ಷ ಕುಮಾರಸ್ವಾಮಿ ಇದ್ದರು.