ಜಿಲ್ಲೆ

ವಿದ್ಯಾರ್ಥಿ ಜೀವನದಲ್ಲಿರಲಿ ಧನಾತ್ಮಕ ಚಿಂತನೆ

ಪ್ರಶಾಂತ ಜಿ. ಭಾಗ್ವತ

ನಿವೃತ್ತ ಪ್ರಾಂಶುಪಾಲ ಪ್ರೊ. ಶ್ರೀಧರಪ್ರಸಾದ್​ ಕೆ. ಸಲಹೆ

ಡಾ. ಜಿ.ಶಂಕರ್​ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳು ವಿಶಾಲ ಮನೋಭಾವದೊಂದಿಗೆ ಸಂಶೋಧನಾತ್ಮಕವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ತಮ್ಮ ವಿಚಾರಧಾರೆಯನ್ನು ಚರ್ಚೆ ಮಾಡಬೇಕು. ತನ್ಮೂಲಕ ಧನಾತ್ಮಕ ಚಿಂತನೆ ಬೆಳೆಸಿಕೊಂಡು ಭವಿಷ್ಯದಲ್ಲಿ ಬರಲಿರುವ ಎಲ್ಲ ಸವಾಲು ಎದುರಿಸಲು ಸಮರ್ಥರಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಶ್ರೀಧರಪ್ರಸಾದ್​ ಕೆ. ಸಲಹೆ ನೀಡಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಿಕೇತನಾ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ ಪ್ರೊ. ಕೃಷ್ಣ ಭಟ್​, ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಸುಚಿತ್ರಾ ಟಿ., ರಸಾಯನಶಾಸ್ತ್ರ ಭಾಗದ ಮುಖ್ಯಸ್ಥ ಪುನೀತ ತೆಂಡುಲ್ಕರ್​ ಉಪಸ್ಥಿತರಿದ್ದರು.

ರೀಜಾ ಸ್ವಾಗತಿಸಿದರು. ಎಂಕಾಂ ವಿಭಾಗದ ಸಂಯೋಜಕಿ ಡಾ. ವಾರಿಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣ್ಯಾ ವಂದಿಸಿದರು. ಅಲಿಷಾ ಕಾರ್ಯಕ್ರಮ ನಿರೂಪಿಸಿದರು.

ಸ್ನಾತಕೋತ್ತರ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ವಿಚಾರ ಸಂಕಿರಣಗಳಂತಹ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಪ್ರಸಿದ್ಧ ರ್ಜನಲ್​ಗಳಲ್ಲಿ ಪೇಪರ್​ ಪ್ರಕಟಿಸುವ ಮೂಲಕ ಕಾಲೇಜಿಗೆ ತಮ್ಮ ಕೊಡುಗೆ ನೀಡಬೇಕು. | ಪ್ರೊ. ಸೋಜನ್​ ಕೆ.ಜಿ. ಕಾಲೇಜಿನ ಪ್ರಾಂಶುಪಾಲ.