raichur  
ಜಿಲ್ಲೆ

ಪ್ರಧಾನಿ ಬಗ್ಗೆ ಅವಹೇಳನೆ ಪೋಸ್ಟ್ : ಆರೋಪಿ ಬಂಧನ

ಸಿಂಧನೂರು ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಯುದ್ಧ ವಿಮಾನ ಬಗ್ಗೆ ಅವಹೇಳನಕಾರಿ ಪೋಸ್ಟ ಹಾಕಿದ ಯುವಕನನ್ನು ತುರ್ವಿಹಾಳ ಪೊಲೀಸರು ಗುರುವಾರ ಬಂಧಿಸಿದ್ದಾರೆ

ತಾಲೂಕಿನ ಕೆ.ಹೊಸಳ್ಳಿ ಗ್ರಾಮದ ಅಜ್ಮೀರ್ ಎನ್ನುವ ಯುವಕ ನಾಲ್ಕು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ದೇಶದ ರಫೆಲ್ ಯುದ್ದ ವಿಮಾನ ಬಗ್ಗೆ ಚಿತ್ರಗಳನ್ನು ಹಾಕಿ

ಅವಹೇಳನೆಯ ಪೋಸ್ಟ್ ಮಾಡಿದ್ದರು. ಇದರಿಂದ ರೊಚ್ವಿಗೆದ್ದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನೆಲ್ಲೆ ಯುವಕನನ್ನು ತುರ್ವಿಹಾಳ ಪೊಲೀಸರುಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.