ಜಿಲ್ಲೆ

ಸೌಕರ್ಯ ವಂಚಿತ ಕೈಗಾರಿಕಾ ಪ್ರದೇಶ

ಎನ್.ವೆಂಕಟೇಶ್

 ಕುಡುಮಲಕುಂಟೆ ಕಡೆಗಣಿಸಿದ ಸರ್ಕಾರ, ಕೆಐಡಿಬಿ

ಸಿ.ಎ.ಮುರಳೀಧರ್​ ಗೌರಿಬಿದನೂರು

ತಾಲೂಕಿನ ಕುಡುಮುಲ ಕುಂಟೆ ಕೈಗಾರಿಕಾ ಪ್ರದೇಶ ಪ್ರಾರಂಭವಾಗಿ 15 ವರ್ಷಗಳು ಕಳೆಯುತ್ತಿದ್ದು, ಮೂರನೇ ಹಂತ ಪ್ರದೇಶ ಅಭಿವೃದ್ಧಿ ಆಗುತ್ತಿದೆ. ಆದರೆ ಒಂದು ಮತ್ತು ಎರಡನೇ ಹಂತದ ಕೈಗಾರಿಕೆ ವಲಯದಲ್ಲಿ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮತ್ತು ಕೆಐಎಡಿಬಿ ವಿಫಲವಾಗಿದೆ.

ಎರಡೂ ಹಂತಗಳಲ್ಲಿ ವಿವಿಧ ಕೈಗಾರಿಕೆಗಳ ಜತೆಗೆ ಖಾಸಗಿ ವಸತಿ ನಿಲಯಗಳು, ಪೆಟ್ರೋಲ್​ ಬಂಕ್​ ಮದ್ಯ ಮಾರಾಟದ ಅಂಗಡಿಗಳು ತಲೆಯೆತ್ತಿವೆ. ಆದರೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸದ ಕಾರಣ ಜನ ಸಂಕಷ್ಟ ಅನುಭವಿಸುವಂತಾಗಿದೆ.

ಅಗ್ನಿ ಶಾಮಕ ದಳ ತುರ್ತು ಅಗತ್ಯ

ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಹಾಗೂ ಪ್ಲಾಸ್ಟಿಕ್​ ಸಂಬಂಧಿ ಕಾರ್ಖಾನೆಗಳು ಹೆಚ್ಚಾಗಿವೆ. ತ್ಯಾಜ್ಯಗಳಿಗೆ ಬೆಂಕಿ ತಗುಲಿ ಆಗಾಗ ಅಗ್ನಿ ಅವಡಗಳು ಸಂಭವಿಸುತ್ತವೆ. ಕಳೆದ 4 ತಿಂಗಳ ಹಿಂದೆ ಕಾರ್ಖಾನೆಯ ಕಸದ ರಾಶಿಗೆ ಬಿದ್ದ ಬೆಂಕಿಯನ್ನು ನಂದಿಸಲು ಅರ್ಧ ದಿನ ಹರಸಾಹಸ ಪಡಬೇಕಾಯಿತು. ಆದ್ದರಿಂದ ಇಂತಹ ಅವಡಗಳು ಸಂಭವಿಸಿದಾಗ ತಣ ಬೆಂಕಿ ನಂದಿಸಲು ಸ್ಥಳಿಯವಾಗಿ ಅಗ್ನಿ ಶಾಮಕ ದಳದ ವ್ಯವಸ್ಥೆ ಮಾಡಬೇಕಿದೆ.

ಇಎಸ್​ಐ ಆಸ್ಪತ್ರೆ ಯಾವಾಗ?

ಕೈಗಾರಿಕಾ ವಲಯದಲ್ಲಿ ಸಹಸ್ರಾರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿ ಇಎಸ್​ಐನ ಆಸ್ಪತ್ರೆಯಿಲ್ಲ. ಅನಾರೋಗ್ಯ ಅಥವಾ ಅವಡಗಳ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ಗೌರಿಬಿದನೂರು ನಗರದಲ್ಲಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎಸ್​ಐ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಬೇಕು. ಸ್ಥಳಿಯವಾಗಿ ಇಎಸ್​ಐ ಆಸ್ಪತ್ರೆ ಪ್ರಾರಂಭಿಸಿದಲ್ಲಿ ಸಹಸ್ರಾರು ಮಂದಿ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಅನುಕೂಲವಾಗಲಿದೆ.

ಬೀದಿ ದೀಪ, ಶೌಚಗೃಹವೂ ಇಲ್ಲ

ಕೆಐಎಡಿಬಿ ಕೇವಲ ರೈತರಿಂದ ಜಮೀನು ಸ್ವಾಧಿನಪಡಿಸಿಕೊಂಡು ಕೈಗಾರಿಕೆಗಳ ಉದ್ಯಮಿಗಳಿಗೆ ಜಾಗವನ್ನು ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದೆ. ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ. ಸಹಸ್ರಾರು ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುವ ಕೈಗಾರಿಕಾ ಪ್ರದೇಶದಲ್ಲಿ ಕೈಗೆಟಕುವ ದರದ ವಸತಿ ನಿಲಯಗಳು, ಕನಿಷ್ಠ ಸೂಕ್ತ ಬೀದಿ ದೀಪ, ಶುದ್ಧ ಕುಡಿಯುವ ನೀರಿನ ಟಕ ಹಾಗೂ ಶೌಚಗೃಹಗಳ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಲ್ಲದೇ ಸದರಿ ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ವೈಾನಿಕವಾಗಿ ಆಗುತ್ತಿಲ್ಲ ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ರಮ ಜರುಗಿಸದಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕುಡುಮಲಕುಂಟೆಯ ಮೊದಲ ಮತ್ತು ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಆದರೆ 3ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕು ಮೊದಲು 1 ಹಾಗೂ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಸೂಕ್ತ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು.

| ಕೃಷ್ಣ ಸ್ಥಳಿಯ ವಾಸಿ

ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಶಾಮಕ ದಳ ಟಕ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕೆಐಎಡಿಬಿಗೆ ಸೂಚನೆ ನೀಡಲಾಗಿದೆ.

| ಕೆ.ಎಚ್​.ಪುಟ್ಟಸ್ವಾಮಿಗೌಡ ಶಾಸಕ