ಮಂಜುನಾಥ ತಿಮ್ಮಯ್ಯ ಮೈಸೂರು
ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣದ ನಡುವೆ ಸಮನ್ವಯದ ಕೊರತೆ ಹಾಗೂ ಈ ಮೂರು ವಿಭಾಗಗಳಿಗೆ ಪ್ರತ್ಯೇಕ ‘ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ)ಗಳೇ’ ಆಡಳಿತಾತ್ಮಕ ತೊಡಕಾಗಿ ಪರಿಣಮಿಸಿವೆ.
ಇದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ‘ಮೈಸೂರು ಜಿಲ್ಲೆಯ ಕರ್ನಾಟಕ ಪಬ್ಲಿಕ್ ಶಾಲೆಗಳು(ಕೆಪಿಎಸ್) ಕಾರ್ಯನಿರ್ವಹಿಸುತ್ತಿರುವ ಕಾರ್ಯಗಳ ಸ್ವರೂಪ ಮತ್ತು ಕಾರ್ಯಕ್ಷಮತೆ’ ಕುರಿತು ಅಧ್ಯಯನ ನಡೆಸಲಾಗಿದೆಇದರಲ್ಲಿ ಸಕಾರಾತ್ಮಕ ಬೆಳವಣಿಗೆಗಳೊಂದಿಗೆ ಲೋಪ-ದೋಷ ಕುರಿತು ಬೆಳಕು ಚೆಲ್ಲಲಾಗಿದೆ.
ಒಂದೇ ಸೂರಿನಡಿ ಗುಣಾತ್ಮಕ ಶಿಕ್ಷಣ ಪ್ರಾಥಮಿಕದಿಂದ ಪದವಿ ಪೂರ್ವ ಶಿಕ್ಷಣದವರೆಗೆ ದೊರೆಯಬೇಕೆಂಬ ಸದಾಶಯದಿಂದ ಕೆಪಿಎಸ್ ಪ್ರಾರಂಭಿಸಲಾಗಿದೆ. ಆದರೆ, ಈ ಆಶಯವೇ ಸಾಕಾರಾಗೊಂಡಿಲ್ಲ ಎಂಬುದು ಈ ವರದಿಯಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.
ಪ್ರಸ್ತುತ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣ ವಿಭಾಗಗಳು ಇನ್ನೂ ಒಟ್ಟಾಗಿ ಸೇರಿ ಕಾರ್ಯನಿರ್ವಹಿಸುತ್ತಿಲ್ಲ. ಯಾವುದೇ ಪ್ರೌಢಶಾಲಾ ಶಿಕ್ಷಕರು, ಪ್ರಾಥಮಿಕ ಶಾಲೆಯಲ್ಲಾಗಲಿ ಅಥವಾ ಯಾವುದೇ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಪ್ರೌಢಶಾಲೆಯಲ್ಲಾಗಲಿ ಪಾಠ ಮಾಡುತ್ತಿಲ್ಲ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.
ಒಂದೇ ಸಮುಚ್ಚಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಎಲ್ಲ ಸಂಸ್ಥೆಗಳ ಭಾಗಿದಾರರಲ್ಲಿ ‘ಇಡೀ ಸಂಸ್ಥೆಯೇ ಒಂದು’ ಎಂಬ ಭಾವವೇ ಇನ್ನೂ ಬಂದಿಲ್ಲ. ವೇಳಾಪಟ್ಟಿಯಲ್ಲಾಗಲಿ, ಸಂಪನ್ಮೂಲ ಬಳಕೆಯಲ್ಲಾಗಲಿ ಮೂರು ವಿಭಾಗದ ಶಿಕ್ಷಕರು ತಮ್ಮ ಹಿಂದಿನ ಕರ್ತವ್ಯದ ಮಾದರಿಯನ್ನೇ ಅನುಸರಿಸುತ್ತಿದ್ದಾರೆ. ಈ ಮೂರು ವಿಭಾಗಗಳು ರಾಷ್ಟ್ರೀಯ ಹಬ್ಬ ಹಾಗೂ ವಿವಿಧ ದಿನಾಚರಣೆಗಳ ಸಂದರ್ಭದಲ್ಲಿ ಮಾತ್ರ ಒಟ್ಟಾಗಿ ಭಾಗವಹಿಸುತ್ತಾರೆ. ಉಳಿದಂತೆ ಶೈಕ್ಷಣಿಕವಾಗಿ ಒಟ್ಟಾಗಿ ಪರಸ್ಪರ ಸಹಕಾರವನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿಲ್ಲ. ಅದಕ್ಕಾಗಿ ಶಾಲಾ ಸಮುಚ್ಚಯವು ಪೂರ್ಣಪ್ರಮಾಣದಲ್ಲಿ ಇನ್ನೂ ಕಾರ್ಯಾರಂಭಗೊಂಡಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಮೂರು ವಿಭಾಗಗಳಿಗೂ ಪ್ರತ್ಯೇಕ ಎಸ್‌ಡಿಎಂಸಿ ಅಸ್ತಿತ್ವದಲ್ಲಿ ಇವೆ. ಇದು ಸಹ ಆಡಳಿತಾತ್ಮಕ ವಿಷಯಗಳಿಗೆ ಅಡ್ಡಿಯಾಗಿದೆ. ಎಲ್ಲ ಸಂಸ್ಥೆಗಳನ್ನು ಸೇರಿಸಿ ಒಂದೇ ಸಮಿತಿಯನ್ನು ರಚಿಸಿದರೆ ಒಳಿತಾಗಲಿದೆ ಎಂದೂ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಕೆಪಿಎಸ್ ಜನ್ಮ ತಳೆದು ಕೇವಲ 6 ವರ್ಷವಾಗಿದೆ. ಜನರು ಈ ಸ್ಕೂಲ್‌ನತ್ತ ವಿಶೇಷ ಕಾಳಜಿಯಿಂದ ನೋಡುತ್ತಿದ್ದಾರೆ. ದಾಖಲಾತಿ ಸಹ ಹೆಚ್ಚಾಗಿದೆ. ಆಂಗ್ಲ ಮಾಧ್ಯಮ ಕಲಿಕೆಯೂ ಇದರ ಜನಪ್ರಿಯತೆಗೆ ಮತ್ತೊಂದು ಪ್ರಮುಖ ಕಾರಣ. ಆದರೆ, ಶಿಕ್ಷಕರಿಗೆ ತರಬೇತಿ ನೀಡಿಲ್ಲ. ಇದರ ಅವಶ್ಯಕತೆ ಅಗತ್ಯವಾಗಿದೆ.
ಇಲ್ಲಿ ಭೌತಿಕ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಶಿಕ್ಷಕ ಸಂಪನ್ಮೂಲವನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಗ್ರಂಥಾಲಯ, ಪ್ರಯೋಗಾಲಯಗಳೇನೇ ಇವೆ. ಆದರೆ, ಶಿಕ್ಷಕರಲ್ಲಿ ವೃತ್ತಿಪರತೆ ಗೋಚರವಾಗುತ್ತಿಲ್ಲ. ಆದ್ದರಿಂದ ಹೆಚ್ಚು ಆಶಾಭಾವನೆಯಿಂದ ಜನ್ಮ ತಳೆದ ಈ ಶಾಲೆಗಳಿಗೆ ವಿಶೇಷ ಗಮನ ನೀಡಬೇಕು. ಇಲ್ಲದಿದ್ದರೆ ಮಾಮೂಲಿನಂತಾಗಲಿದೆ.
ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ-ಯುಕೆಜಿ) ವಿಭಾಗವನ್ನೂ ಇದೀಗ ತೆರೆಯಲಾಗಿದೆ. ಶಾಲೆಯಿಂದ ಮಕ್ಕಳು ವಿಮುಖರಾಗುವುದನ್ನು ಇದು ತಪ್ಪಿಸುವ ನಿರೀಕ್ಷೆ ಹುಟ್ಟಿಸಿದೆ.
ವರದಿಯಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕೆಲಸವನ್ನೂ ಮಾಡಲಾಗಿದೆ.
*ಈ ಶಾಲೆಗಳಲ್ಲಿರುವ ಎಲ್ಲ ಸ್ತರದ ಶಿಕ್ಷಣ ವಿಭಾಗಗಳನ್ನು ಏಕತೆಗೊಳಿಸಿ ಪ್ರತ್ಯೇಕತಾ ಭಾವ ಹೋಗಲಾಡಿಸಬೇಕು. ಇದಕ್ಕಾಗಿ ಒಂದೇ ಆಡಳಿತ ವ್ಯವಸ್ಥೆ ತರಬೇಕು.
* ಬೋಧಕರಿಗೆ ವೃತ್ತಿಪರತೆ ವೃದ್ಧಿಗಾಗಿ ತರಬೇತಿ ಕೊಡಿಸಬೇಕು.
*ಮಾರ್ಗಸೂಚಿಯಂತೆ ಕೆಪಿಎಸ್ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿವೆಯೇ?
*ಪಾಲಕರು, ಸಮುದಾಯವು ಕೆಪಿಎಸ್ ಕುರಿತು ಹೊಂದಿರುವ ಮನೋಧೋರಣೆ ಏನು?
*ಈ ಶಾಲೆಗಳ ಕಾರ್ಯಕ್ಷಮತೆ ಅರಿಯುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಅಗತ್ಯ ಒಳನೋಟ ಶೋಧಿಸಲು