ಜಿಲ್ಲೆ

ಸ್ವಾವಲಂಬನೆಗೆ ಯೋಜನೆಗಳ ಬಲ

Davangere - Desk - Shobha Krishna Gowda

ಹೊನ್ನಾಳಿ: ಪ್ರಕೃತಿ ಹಾಗೂ ಪಂಚಭೂತಗಳಲ್ಲಿ ಸ್ತ್ರೀಯರನ್ನು ಕಾಣಲಾಗುತ್ತದೆ. ಅಂಥ ಶ್ರೇಷ್ಠತೆ ಮಹಿಳೆಯರಿಗಿದೆ ಎಂದು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ರಾಮಚಂದ್ರಪ್ಪ ಹೇಳಿದರು.

ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಗತಿ ಹೊಂದಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಸ್ತ್ರೀ ಸ್ವಾವಲಂಬನೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಮುಖಂಡ ಜೆ.ಯು. ಮಂಜುನಾಥ್ ಮಾತನಾಡಿ, ಹೆಣ್ಣು ಮನಸ್ಸು ಮಾಡಿದರೆ ದೇಶ ಆಳಬಲ್ಲಳು ಎಂಬುದನ್ನು ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ನಿರೂಪಿಸಿದ್ದಾರೆ. ಕಾಲಕಾಲಕ್ಕೆ ಅನೇಕ ಮಹಿಳೆಯರು ರಾಜ್ಯ- ಕೇಂದ್ರ ಸರ್ಕಾರಗಳಲ್ಲಿ ವಿವಿಧ ಹಂತಗಳಲ್ಲಿ ಅಧಿಕಾರ ನಿಭಾಯಿಸಿದ್ದಾರೆ ಎಂದು ತಿಳಿಸಿದರು.

ವಿಜಯಲಕ್ಷ್ಮೀ, ಗೌರಮ್ಮ, ರೇಣುಕಾ, ಕರಿಬಸಪ್ಪ, ನಿರ್ಮಲಾ ಹಾಗೂ ಇತರರು ಇದ್ದರು.