ಜಿಲ್ಲೆ

ಚರಂಡಿ ನೀರು ಹರಿವಿಗೆ ಇಲಾಖೆ ಕ್ರಮ

ಇಂದಿರಾ ಎನ್ ಕೆ

ಬ್ರಹ್ಮಾವರ: ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿರುವ ಅಂಗನವಾಡಿ ಕೇಂದ್ರದ ಆವರಣದ ಕಡೆಗೆ ಹರಿಯುತ್ತಿದ್ದ ಚರಂಡಿ ನೀರನ್ನು ಮುಖ್ಯ ರಸ್ತೆಯ ಚರಂಡಿಗೆ ಹರಿಯುವಂತೆ ಮಾಡಲಾಗಿದೆ.

ಲೋಕೋಪಯೋಗಿ ಇಲಾಖೆಯು ರಸ್ತೆ, ಚರಂಡಿ ದುರಸ್ತಿ ಮಾಡುವಾಗ ಚರಂಡಿ ನೀರನ್ನು ಸಮೀಪದ ಅಂಗನವಾಡಿ ಕೇಂದ್ರದ ಕಾಂಪೌಂಡ್ ಕಡೆಗೆ ಹರಿದು ಹೋಗುವಂತೆ ಸಂಪರ್ಕ ಕಲ್ಪಿಸಿದ್ದರು. ಇದರ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು ಅಂಗನವಾಡಿ ಕೇಂದ್ರದತ್ತ ಹರಿಯುತ್ತಿದ್ದ ಚರಂಡಿಗೆ ಕಟ್ಟಕಟ್ಟಿ ಮುಖ್ಯ ರಸ್ತೆ ಚರಂಡಿಗೆ ಸಂಪರ್ಕ ಕಲ್ಪಿಸಿ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ.

ಬಾರಕೂರು ಕೋಟೆ ಮತ್ತು ಆಸ್ಪತ್ರೆ ಭಾಗದಲ್ಲಿ ರಸ್ತೆಯಲ್ಲಿ ನೀರು ನಿಲ್ಲುತ್ತಿತ್ತು. ನೀರು ಸರಾಗ ಹರಿವಿಗೆ ಚರಂಡಿ ನಿರ್ಮಿಸಲಾಗಿತ್ತು. ಆದರೆ ಆಸ್ಪತ್ರೆ ಎದುರು ಭಾಗದ ಚರಂಡಿಯನ್ನು ಮುಖ್ಯ ರಸ್ತೆಯ ಚರಂಡಿಗೆ ಜೋಡಿಸುವ ಬದಲು ಅಂಗನವಾಡಿ ಆವರಣಕ್ಕೆ ನೀರು ಹರಿಯುವಂತೆ ಮಾಡಿ ಇಲಾಖೆ ಎಡವಟ್ಟು ಮಾಡಿತ್ತು.