ಬೆಂಗಳೂರು: ರಾಜ್ಯದ ಸರ್ಕಾರಿ ವೈದ್ಯಕಿಯ ಕಾಲೇಜುಗಳಲ್ಲಿ ರಕ್ತನಾಳ ಕಾಯಿಲೆ ಪತ್ತೆಹಚ್ಚಲು ಪ್ರತ್ಯೇಕವಾಗಿ ವ್ಯಾಸ್ಕ್ಯುಲಾರ್ ವಿಭಾಗ ಆರಂಭಿಸುವುದಾಗಿ ವೈದ್ಯಕಿಯ ಶಿಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕಂಠೀರವ ಆಟದ ಮೈದಾನದಲ್ಲಿ ವ್ಯಾಸ್ಕ್ಯುಲಾರ್ ಸೊಸೈಟಿ ಆಫ್ ಇಂಡಿಯಾ ಸಹಯೋಗದಲ್ಲಿ ವ್ಯಾಸ್ಕರ್ ಸಂಸ್ಥೆ ಭಾನುವಾರ ಆಯೋಜಿಸಿದ್ದ ವಾಕಥಾನ್ಗೆ ಚಾಲನೆ ನೀಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ವ್ಯಾಸ್ಕ್ಯುಲಾರ್ ವಿಭಾಗ ತೆರೆಯಲಾಗುವುದು. ಬೆಂಗಳೂರು ಹಾಗೂ ಮೈಸೂರಿನಲ್ಲಿ ಈಗಾಗಲೆ ಆರಂಭವಾಗಿರುವ ವಿಭಾಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲುಬುರಗಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಸದ್ಯದಲ್ಲೇ ಆರಂಭವಾಗಲಿದೆ. ವಿಕ್ಟೋರಿಯಾ, ಸಂಜಯ್ ಗಾಂಧಿ ಆಸ್ಪತ್ರೆಗಳಲ್ಲಿಯೂ ವಿಭಾಗ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಎಂ.ಕೆ. ರಮೇಶ್ ಮಾತನಾಡಿ, ಹಿಂದೆ ಸೂಕ್ತ ಚಿಕಿತ್ಸೆಯಿಲ್ಲದೆ ನಿರಂತರವಾಗಿ ಅಂಗಚ್ಛೇದ ಶಸಚಿಕಿತ್ಸೆ ನಡೆಯುತ್ತಿತ್ತು. ಕಾಲಕ್ರಮೇಣ ವ್ಯಾಸ್ಕ್ಯುಲಾರ್ ವಿಭಾಗದಲ್ಲಿ ನಡೆದ ಹೆಚ್ಚಿನ ಅಧ್ಯಯನಗಳಿಂದ ವಿಕಲತೆ ಪ್ರಮಾಣ ತಗ್ಗಿರುವುದು ಆಶಾದಾಯಕ ಬೆಳವಣಿಗೆ. ಜೀವಕ್ಕೆ ಅಪಾಯ ತಂದೊಡ್ಡುವ ರಕ್ತನಾಳದ ಸಮಸ್ಯೆಗಳ ಬಗ್ಗೆ ಯುವಜನರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ವ್ಯಾಸ್ಕ್ಯುಲಾರ್ ಸರ್ಜನ್ ಡಾ.ಕೆ.ಆರ್.ಸುರೇಶ್ ಮಾತನಾಡಿ, ಹೃದಯಾಘಾತದಂತೆ (ಹಾರ್ಟ್ ಅಟ್ಯಾಕ್) ಲೆಗ್ ಅಟ್ಯಾಕ್ ಸಹ ಮನುಷ್ಯನಿಗೆ ಪ್ರಾಣಾಂತಿಕವಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ನಡೆಯುವಾಗ ಕಾಲಿನಲ್ಲಿ ನೋವು ಕಂಡುಬಂದರೆ, ಕಾಲಿನಲ್ಲಿ ಜೋಮು ಹಾಗೂ ತಂಪಿನಂತಹ ಲಕ್ಷಣಗಳು ಕಂಡುಬಂದಾಗ ಹತ್ತಿರದ ವ್ಯಾಸ್ಕ್ಯುಲಾರ್ ವೈದರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಕಂಠೀರವ ಮೈದಾನದಲ್ಲಿ ಆರಂಭವಾದ ಜಾಥಾವು ಕಸ್ತೂರಿ ಬಾ ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ ಮೂಲಕ ಸಾಗಿ ಕಂಠೀರವ ಸ್ಟೇಡಿಯಂನಲ್ಲಿ ಸಮಾಪ್ತಿಯಾಯಿತು. ರಾಷ್ಟ್ರೀಯ ಭದ್ರತೆ ಮಾಜಿ ಸಲಹೆಗಾರ ವಿ.ಕೆ. ಆತ್ರೆ, ವಿಎಸ್ಐ ಅಧ್ಯಕ್ಷ ಡಾ.ವಿವೇಕಾನಂದ, ರಾಜ್ಯ ವ್ಯಾಸ್ಕರ್ ಸೊಸೈಟಿ ಕಾರ್ಯದರ್ಶಿ ಡಾ.ವಿಷ್ಣು, ನಟಿ ಸಂಜನಾ ಗಲ್ರಾನಿ ಸೇರಿ ಸಾವಿರಕ್ಕೂ ಹೆಚ್ಚು ವೈದ್ಯರು, ವಿದ್ಯಾರ್ಥಿಗಳು, ಶೂಶ್ರೂಷಕ ಸಿಬ್ಬಂದಿ ಮತ್ತಿತರರಿದ್ದರು.
15 ಸಾವಿರ ರೋಗಿಗಳಿಗೆ ಚಿಕಿತ್ಸೆ
ಜಯದೇವ ಆಸ್ಪತ್ರೆಯಲ್ಲಿ ವ್ಯಾಸ್ಕ್ಯುಲಾರ್ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳು ದೊರೆಯಲಿವೆ. ವರ್ಷದಲ್ಲಿ 15 ಸಾವಿರಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಿ 700ಕ್ಕೂ ಹೆಚ್ಚು ಶಸಚಿಕಿತ್ಸೆಗಳು ನಡೆಸಲಾಗುತ್ತಿದೆ ಎಂದು ಜಯದೇವ ಆಸ್ಪತ್ರೆಯ ವ್ಯಾಸ್ಕ್ಯುಲಾರ್ ಸರ್ಜನ್ ಡಾ.ಮುರುಳಿಕೃಷ್ಣ ಮಾಹಿತಿ ನೀಡಿದರು.
ಮೂರು ದಶಕಗಳಿಂದ ವ್ಯಾಸ್ಕ್ಯುಲಾರ್ ಸರ್ಜನ್ ಅಸೋಸಿಯೇಷನ್ ನಿರಂತರ ಸೇವೆ ಸಲ್ಲಿಸುತ್ತಿದೆ. ಡಾ.ಎನ್.ಕೆ. ಭಗವಾನ್ ಅವರ ದೂರದೃಷ್ಟಿ ಹಾಗೂ ಪ್ರಸ್ತುತ ಡಾ.ಕೆ.ಆರ್. ಸುರೇಶ್ ಮಾರ್ಗದರ್ಶನದಲ್ಲಿ ಸಹಸ್ರಾರು ಶಸಚಿಕಿತ್ಸೆಗಳ ಮೂಲಕ ಸಾವಿರಾರು ರೋಗಿಗಳು ಶಾಶ್ವತ ಅಂಗವಿಕಲರಾಗುವುದನ್ನು ತಪ್ಪಿಸಿರುವುದು ಹೆಮ್ಮೆಯ ಸಂಗತಿ. ವ್ಯಾಸ್ಕಾರ್ ಅರಿವು ಕಾರ್ಯಕ್ರಮ ನಿರಂತರವಾಗಿ ಇರಲಿದೆ.
ಡಾ.ವೆಂಕಟೇಶ್ ರೆಡ್ಡಿ. ವ್ಯಾಸ್ಕಾರ್ ಅಧ್ಯಕ್ಷ