ಗಂಗಾವತಿ ಕೆವಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನ ಕಾರ್ಯಕ್ರಮವನ್ನು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಂಗಳವಾರ ಉದ್ಘಾಟಿಸಿದರು. ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ ಮಳಗಿ ಇತರರಿದ್ದರು.  
ಜಿಲ್ಲೆ

ಮಣ್ಣು-ನೀರಿನ ಸಂರಕ್ಷಣೆ ಆದ್ಯತೆಯಾಗಲಿ

ಗಂಗಾವತಿ: ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ರೈತರು ಆದ್ಯತೆ ನೀಡಬೇಕಿದ್ದು, ಪರ್ಯಾಯ ಬೆಳೆಗಳತ್ತ ಗಮನಹರಿಸುವಂತೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಸಲಹೆ ನೀಡಿದರು.

ನಗರದ ಕೆವಿಕೆ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಎಂಸಿಎ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಅತಿಯಾದ ರಾಸಾಯನಿಕ ಬಳಕೆ ಮತ್ತು ಒಂದೇ ಬೆಳೆಗಳ ಮೇಲೆ ಅವಲಂಬನೆಯಿಂದ ಮಣ್ಣಿನ ಲವತ್ತತೆ ಮೇಲೆ ಪರಿಣಾಮ ಬೀರಲಿದೆ. ಮಣ್ಣು ಸಂರಕ್ಷಣೆಗಾಗಿ ಕಷಿ ಇಲಾಖೆಯಿಂದ ಮಣ್ಣು ಆರೋಗ್ಯ ಅಭಿಯಾನ, ಮಣ್ಣು ಆರೋಗ್ಯ ಚೀಟಿ ವಿತರಣೆ ಇತರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಬೇಸಿಗೆಯಲ್ಲಿ ಭತ್ತಕ್ಕೆ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ಭತ್ತ ಕಟಾವು ನಂತರ ಭತ್ತದ ಹುಲ್ಲು ಸುಡದೆ ಸಂಗ್ರಹಣೆ ಮಾಡುವಂತೆ ಸಲಹೆ ನೀಡಿದರು.

ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಮಾತನಾಡಿ, ದಿನಾಚರಣೆ ಮೂಲಕ ಮಣ್ಣಿನ ಮಹತ್ವದ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಮಣ್ಣು ಮತ್ತು ನೀರು ಜೀವನದ ಮೂಲ. ಮಣ್ಣಿಗೆ ಸಾವಯವ ವಸ್ತು ಸೇರಿಸುವ ಮೂಲಕ ಸಾವಯವ ಇಂಗಾಲದ ಅಂಶ ಹೆಚ್ಚಿಸಬೇಕಿದೆ ಎಂದರು.

ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ ಮಳಗಿ, ಕೆವಿಕೆ ತಜ್ಞರಾದ ಡಾ.ಕವಿತಾ ಉಳ್ಳಿಕಾಶಿ, ಡಾ.ಆರ್.ಜ್ಯೋತಿ, ಜೆ. ರಾಧಾ, ಡಾ.ಕ್ಕೀರಪ್ಪ ಅರಂಭಾವಿ, ಮಮತಾ ಮದ್ಲಿ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್, ತೋಟಗಾರಿಕೆ ಹಿರಿಯ ಸಹಾಯಕ ಅಧಿಕಾರಿ ಕಿರಣ್, ಸರ್ಕಾರಿ ಕೃಷಿ ಕಾಲೇಜು ವಿಶೇಷಾಧಿಕಾರಿ ಡಾ.ಜೆ.ವಿಶ್ವನಾಥ, ಎಂಸಿಎ್ ಉಪ ವ್ಯವಸ್ಥಾಪಕ ಡಿ.ಕೆ.ಮಹೇಶ, ಪ್ರಗತಿಪರ ರೈತ ಗಾದಿಲಿಂಗಪ್ಪ ಚಳ್ಳೂರು ಹಾಗೂ ಕೃಷಿ ಸಖಿಯರಿದ್ದರು.