ಇನ್ನರ್ ವೀಲ್ ಕ್ಲಬ್ ಆಫ್ ಗದಗ ಮಿಡ್ ಟೌನ್ ದಿಂದ ಶ್ರೀ ಜಗದಂಬಾ ಶಿಕ್ಷಣ ಕೇಂದ್ರ ಗದಗ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಡಾ.ಕಾಜಲ್ ಖೋನಾ ಅವರು ಉಚಿತವಾಗಿ 6 ರಿಂದ 10ನೆಯ ತರಗತಿಯ ವಿದ್ಯಾರ್ಥಿಗಳಿಗೆ ದಂತ ತಪಾಸಣೆಯನ್ನು ಮಾಡಿ ಹಾಗೂ ಇದರ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿಸಿಕೊಟ್ಟರು. ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಕಾರ್ಯದರ್ಶಿಯಾದ ಶ್ರೀಮತಿ ಪ್ರೀತಿ ಶಿವಪ್ಪನಮಠ, ಖಜಾಂಚಿಯಾದ ಶ್ರೀಮತಿ ರಾಣಿ ಚಂದಾವರಿ, ಐ ಎಸ್ ಓ ಆದ ಶ್ರೀಮತಿ ಸುವರ್ಣ ಹೊನ್ನಗುಡಿ, ಸಂಸ್ಥೆಯ ಚೇರ್ಮನ್ ರಾದ ಶ್ರೀಯುತ ಶ್ರೀನಿವಾಸ್.ಬಿ. ಖಟವಟೆ, ಸಂಸ್ಥೆಯ ಹಾಗೂ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ರೇಖಾ ಖಟವಟೆ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾದ ಐ. ಎಸ್. ಗಣಚಾರಿ, ಹಾಗೂ ರವಿ ಬಡಿಗೇರ್, ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದರ ಪ್ರಾಯೋಜಕತ್ವವನ್ನು ಮಾಜಿ ಅಧ್ಯಕ್ಷರಾದ ವಿದ್ಯಾ ಸ್ವಾಮಿ ಹಾಗೂ ಶೈಲಜಾ ಸರಗಣಾಚಾರಿ ಇವರು ವಹಿಸಿಕೊಂಡಿದ್ದರು.