ಮಂಗಳೂರು: ಬಾಯಿ ನಮ್ಮ ದೇಹದ ಆರೋಗ್ಯದ ಹೆಬ್ಬಾಗಿಲು. ನಾವು ತಿನ್ನುವ ಆಹಾರ ಬಾಯಿಯ ಮುಖಾಂತರವೇ ಹೊಟ್ಟೆಗೆ ಹೋಗುತ್ತದೆ. ದಿನಕ್ಕೆರಡು ಬಾರಿ ಹಲ್ಲುಜ್ಜಿಕೊಂಡು ನಿರಂತರ ದಂತ ವೈದ್ಯರ ಸಂದರ್ಶನ ಮಾಡಿಕೊಂಡು ಹಲ್ಲಿನ ಆರೋಗ್ಯ ಕಾಪಾಡಿಕೊಂಡರೆ ದೀರ್ಘಾಯುಷಿಗಳಾಗಬಹುದು ಎಂದು ದಂತ ವೈದ್ಯ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕಾಪಿಕಾಡ್‌ನಲ್ಲಿರುವ ದ.ಕ. ಜಿಲ್ಲಾ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ದಂತ ಆರೋಗ್ಯ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಸುಮಾರು 40 ಮಕ್ಕಳಿಗೆ ಉಚಿತವಾಗಿ ದಂತ ಆರೋಗ್ಯ ಮಾಹಿತಿ ಕರಪತ್ರ, ಟೂತ್ ಬ್ರಷ್ ಮತ್ತು ಟೂತ್ ಪೇಸ್ಟ್ ಹಂಚಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಲೀನಾ ಐರಿನ್ ಗೋವಿಯಸ್, ಶಿಕ್ಷಕಿಯರಾದ ಹರ್ಷ ಬಾಳಿಗ, ಸಿಸಿಲಿಯ ಅಪೋಲಿನ್ ಲೋಬೋ ಮತ್ತು ಶೀಲಾವತಿ ಎಸ್. ಉಪಸ್ಥಿತರಿದ್ದರು.