ಶುಕ್ರವಾರ ಬೆಳಗ್ಗೆ ಮಾಲಂಬಿ ಗ್ರಾಮದಲ್ಲಿ ದಟ್ಟಣೆಯ ಮಂಜು ಆವರಿಸಿದ್ದು. 
ಜಿಲ್ಲೆ

ಶನಿವಾರಸಂತೆಯಲ್ಲಿ ದಟ್ಟ ಮಂಜು

ನಾಗೇಶ ಎಸ್

ಶನಿವಾರಸಂತೆ: ಶನಿವಾರಸಂತೆ ವ್ಯಾಪ್ತಿಯ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶುಕ್ರವಾರ ದಟ್ಟ ಮಂಜು ಕಾಣಿಸಿಕೊಂಡಿತ್ತು. ಮಾಲಂಬಿ ಬೆಟ್ಟದ ಸಾಲು ಸೇರಿದಂತೆ ಇಡೀ ಗ್ರಾಮವನ್ನು ಮುಂಜಾನೆಯಿಂದ ಬೆಳಗ್ಗೆ 9ರವರೆಗೂ ಮಂಜು ಆವರಿಸಿತ್ತು. ಮಂಜಿನ ವಾತಾವರಣ ಗ್ರಾಮದ ಸೊಬಗನ್ನು ಹೆಚ್ಚಿಸಿತ್ತು. ವಿಪರೀತ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ಶನಿವಾರಸಂತೆ-ಕುಶಾಲನಗರ-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಲೈಟ್ ಆನ್ ಮಾಡಿಕೊಂಡೇ ಸಂಚರಿಸಿದವು.