ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಎದುರಿನ ಗುರುಕೃಪಾನಗರದ ರಾಜಕಾಲುವೆಯಲ್ಲಿ ಆಳೆತ್ತರ ಕಸ ಬೆಳೆದಿದೆ. ರಸ್ತೆಗಳಲ್ಲಿ ಗುಂಡಿ ಬಿದ್ದು, ಹೊಂಡಗಳAತಾಗಿವೆ. ಮತ್ತೊಂದೆಡೆ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ವಾರದಲ್ಲಿ 2 ಬಾರಿ ಕಸ ಸಂಗ್ರಹಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ನಿವಾಸಿಗಳು ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದು ಪರಿಸರ ಹಾನಿ ಹಾಗೂ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ.
ನಿರಂತರ ಮಳೆಯಿಂದ ಮನೆಗಳ ಸುತ್ತ ಹಾಗೂ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಡೆಂಘೆ ರೋಗದ ಭೀತಿ ಎದುರಾಗಿದೆ. ರಸ್ತೆಯ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಆಗುತ್ತಿಲ್ಲ. ಡೆಂಘೆ ಹಾವಳಿ ತಡೆಗೆ ಫಾಗಿಂಗ್ ಕೂಡ ಮಾಡುತ್ತಿಲ್ಲ. ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಗಮನ ಹರಿಸಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಇಷ್ಟೆಲ್ಲ ಸಮಸ್ಯೆಗಳಿದ್ದರೂ ಚಿಕ್ಕಮಲ್ಲಿಗವಾಡ ಗ್ರಾಮ ಪಂಚಾಯಿತಿ ಸದಸ್ಯರು ಇತ್ತ ಸುಳಿದಿಲ್ಲ. ಈ ಬಗ್ಗೆ ಪಂಚಾಯಿತಿ ಅಽಕಾರಿಗಳು, ಆರೋಗ್ಯ ಇಲಾಖೆ, ಜಿಲ್ಲಾಽಕಾರಿ, ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ.
- ಶಶಿಕಾಂತ ಹೊಂಬಳ, ಕಾರ್ಯದರ್ಶಿ, ಗುರುಕೃಪಾ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ.