ಜಿಲ್ಲೆ

ರಾಜ್ಯದಲ್ಲಿ ತೀವ್ರಗೊಂಡ ಡೆಂಘೆ: 524 ಹೊಸ ಪ್ರಕರಣ

ಪಂಕಜ ಕೆ.ಎಂ.

ಬೆಂಗಳೂರು: ರಾಜ್ಯದಲ್ಲಿ ಡೆಂಘೆ ತೀವ್ರಗೊಂಡಿದ್ದು, ಬುಧವಾರ 524 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 10,973ಕ್ಕೆ ಏರಿಕೆಯಾಗಿದೆ. ಈವರೆಗೂ 8 ಮಂದಿ ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ 2,731 ಶಂಕತ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬೆಂಗಳೂರಿನಲ್ಲಿ 270, ಹಾಸನ 108, ಗದಗ 30, ಧಾರವಾಡ 25, ಕಲಬುರಗಿ 22, ದಾವಣಗೆರೆ 15 ಸೇರಿ 524 ಪ್ರಕರಣಗಳು ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ 11 ಮಕ್ಕಳು, 1ರಿಂದ 18 ವರ್ಷದೊಳಗಿನ 191 ಮಂದಿ ಮತ್ತು 18 ವರ್ಷಗಳು ಮೇಲ್ಪಟ್ಟ 322 ಮಂದಿ ಡೆಂಘೆ ಪೀಡಿತರಾಗಿದ್ದಾರೆ. ಸೋಂಕಿತರಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 535 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2,598 ಮಂದಿ ಮನೆಯಲ್ಲಿ ನಿಗಾದಲ್ಲಿ ಇದ್ದಾರೆ.