ಜಿಲ್ಲೆ

ಕೆಲಗೇರಿಯಲ್ಲಿ ಡೆಂಘೆ ಜಾಗೃತಿ ಜಾಥಾ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಡೆಂಘೆ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ನಗರದ ಕೆಲಗೇರಿಯಲ್ಲಿ ಶುಕ್ರವಾರ ಜನಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಜಿಲ್ಲಾಽಕಾರಿ ದಿವ್ಯ ಪ್ರಭು ನೇತೃತ್ವದಲ್ಲಿ ಮನೆಮನೆಗೆ ತೆರಳಿ ಡೆಂಘೆ ಜಾಗೃತಿ ಕರಪತ್ರ ವಿತರಣೆ ಹಾಗೂ ನೀರಿನ ತೊಟ್ಟಿಗೆ ಲಾರ್ವಾ ಸೊಳ್ಳೆಯ ಮರಿ ಮತ್ತು ಮೊಟ್ಟೆಗಳನ್ನು ತಿನ್ನುವ ಗಪ್ಪಿ ಮೀನು ಬಿಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಜಿಲ್ಲಾಽಕಾರಿ ದಿವ್ಯ ಪ್ರಭು ಮಾತನಾಡಿ, ಜನವರಿಯಿಂದ ಈವರೆಗೆ 253 ಜನರಲ್ಲಿ ಡೆಂಘೆ ದೃಢಪಟ್ಟಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ ಡೆಂಘೆ ಲಕ್ಷಣಗಳಿರುವ 21 ಜನ ಇದ್ದು, ಮೂವರು ಆಸ್ಪತ್ರೆಯಲ್ಲಿ ಮತ್ತು 18 ಜನ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂಘೆ ತಡೆಗೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದರು.
ಜಿಲ್ಲಾ ಆರೋಗ್ಯಾಽಕಾರಿ ಡಾ. ಶಶಿ ಪಾಟೀಲ, ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ಆರ್‌ಸಿಎಚ್‌ಒ ಡಾ. ಸುಜಾತಾ ಹಸವೀಮಠ, ಡಿಎಂಒ ಡಾ. ಮಂಜುನಾಥ ಎಸ್., ತಾಲೂಕು ವೈದ್ಯಾಽಕಾರಿ ಡಾ. ಕೆ.ಎನ್. ತನುಜಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದ್ದರು