raichur 
ಜಿಲ್ಲೆ

ಪಾಲಿಕೆಯಿಂದ ಕಸ ನಿರ್ವಹಣೆಯ ಯಂತ್ರದಿಂದ ಪ್ರಾತ್ಯಕ್ಷತೆ

Raichur - Reporter - Rachhai Swamy

 ರಾಯಚೂರು ನಗರದಲ್ಲಿ ದೂಳು, ಕಸ ನಿರ್ವಹಣೆ ಸರಿದೂಗಿಸಲು ಮತ್ತು ಸ್ವಚ್ಛ ನಗರವನ್ನಾಗಿಸಲು ಮಹಾನಗರ ಪಾಲಿಕೆಯಿಂದ ಕಸ ನಿರ್ವಹಣೆಯ ಹೊಸ ಯಂತ್ರ ಖರೀದಿ ಮಾಡಿದ ಹಿನ್ನಲೆ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬಳಿ ಗುರುವಾರ ಯಂತ್ರಗಳ ಪ್ರಾತ್ಯಕ್ಷತೆಯನ್ನು ಪರೀಕ್ಷಿಸಲಾಯಿತು.

ರಾಯಚೂರು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ ನಂತರ ನಗರವನ್ನು ಧೂಳು ಮುಕ್ತ ಹಾಗೂ ಹಸಿರು ನಗರವನ್ನಾಗಿಸಲು ಪಾಲಿಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಅಂಗವಾಗಿ ಕಳೆದ ಸಾಮಾನ್ಯ ಸಭೆಯಲ್ಲಿ ಕಸ ಗುಡಿಸುವ, ಧೂಳು ನಿರ್ವಹಣೆ ಮಾಡುವ ಸಲುವಾಗಿ ಮಾನವ ಸಂಪನ್ಮೂಲದ ಬದಲಾಗಿ ಪರ್ಯಾಯವಾಗಿ ಯಂತ್ರಗಳನ್ನು ಬಳಸಲು ಪಾಲಿಕೆ ಮುಂದಾಗಿದೆ.

ರೂಟ್ಸ್ ಸೇರಿದಂತೆ ನಾಲೈದು ಕಂಪನಿಗಳಿಂದ ಅದರ ಯಂತ್ರಗಳನ್ನು ತರಿಸಲಾಗಿದ್ದು, ಈ ಯಂತ್ರಗಳಲ್ಲಿರುವ ಕಸ ಗುಡಿಸುವುದು, ಧೂಳು ನಿರ್ವಹಣೆಗೆ ನೀರು ಸಿಂಪಡಿಸುವುದು, ಸಣ್ಣ ಹಾಗೂ ದೊಡ್ಡ ಕಸ, ಘನ ತ್ಯಾಜ್ಯವನ್ನು ಸಕ್ಷನ್ ಮೂಲಕ ಎಳೆದುಕೊಳ್ಳುವ ಹಾಗೂ ಕಸವನ್ನು ಏಕ ಕಾಲಕ್ಕೆ ಸಂಗ್ರಹಿಸಿ ವಿಲೇವಾರಿ ಘಟಕದಲ್ಲಿ ಡಂಪ್ ಮಾಡುವ ಸಾಮರ್ಥ್ಯಗಳನ್ನು ಪರಿಕ್ಷಿಸಲಾಯಿತು.

ಈ ಯಂತ್ರಗಳು ಸಮತಟ್ಟಾದ ರಸ್ತೆಗಳಿಗೆ ಸರಿಹೋಗುತ್ತವೆ. ನಗರದಲ್ಲಿ ರಸ್ತೆಗಳ ಪರಿಸ್ಥಿತಿ ಸರಿಯಿಲ್ಲದ ಕಾರಣ ಎಷ್ಟೇ ಆಧುನಿಕ ಯಂತ್ರಗಳನ್ನು ತಂದರೂ. ಕಸ ನಿರ್ವಹಣೆ, ಸಾಧ್ಯವಾಗುವುದು ಕಷ್ಟವಾಗುತ್ತದೆ ಎಂಬ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದೆ.

ಪ್ರಾತ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್, ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಹಿರಿಯ ಸದಸ್ಯ ಜಯಣ್ಣ, ಕಾರ್ಯನಿರ್ವಾಹ ಅಭಿಯಂತರ ಬಸವರಾಜ ಹೆಬ್ಬಾಳ, ಪರಿಸರ ಅಭಿಯಂತರ ಮಲ್ಲಿಕಾರ್ಜುನ್, ಜಯಪಾಲ ರೆಡ್ಡಿ ಸೇರಿದಂತೆ ಅನೇಕರು ಇದ್ದರು.