ಅಳವಂಡಿ: ದೇಶದ ಪ್ರಗತಿಗೆ ಮಾರಕವಾದ ಜನಸಂಖ್ಯೆ ನಿಯಂತ್ರಣ ಯೋಜನೆ ಪಾಲಿಸುವುದು ಅವಶ್ಯ ಎಂದು ಆರೊಗ್ಯ ನೀರಿಕ್ಷಣಾಧಿಕಾರಿ ಕಾಶಪ್ಪ ತಿಳಿಸಿದರು.
ಇದನ್ನೂ ಓದಿ:http://ಜನಸಂಖ್ಯಾ ನಿಯಂತ್ರಣದಿಂದ ಆರ್ಥಿಕ ಪ್ರಗತಿ
ಸಮೀಪದ ಹಲವಾಗಲಿಯಲ್ಲಿ ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಡೆದ ವಿಶ್ವ ಜನಸಂಖ್ಯೆ ನಿಯಂತ್ರಣ ಹಾಗೂ ಗೃಹ ಲಕ್ಷ್ಮೀ ಯೋಜನೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಜನಸಂಖ್ಯೆ ಹೆಚ್ಚಳದಿಂದ ಅನಕ್ಷರತೆ, ಆರ್ಥಿಕ ಮುಗ್ಗಟ್ಟು, ಬಡತನ ಉಂಟಾಗಲಿದೆ. ಹೆಚ್ಚು ಮಕ್ಕಳನ್ನು ಹೆರುವುದು ಸಾಧನೆಯಲ್ಲ. ಕಡಿಮೆ ಮಕ್ಕಳಿದ್ದರೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಮುಂತಾದ ಸೌಲಭ್ಯಗಳು ಸಿಗಲಿವೆ ಎಂದರು.
ಪ್ರಮುಖರಾದ ಸಿದ್ದಣ್ಣ ಹಳ್ಳಿ, ಚನ್ನಪ್ಪ, ಸಂತೋಷ, ಸಾರೆಪ್ಪ ಆರೋಗ್ಯ ನಿರಿಕ್ಷಣಾಧಿಕಾರಿ ಗವಿಸಿದ್ದಪ್ಪ ಇದ್ದರು.