ಜಿಲ್ಲೆ

ಪ್ರಜಾಪ್ರಭುತ್ವದಿಂದ ನೆಮ್ಮದಿಯ ಜೀವನ, ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್ ಅಭಿಪ್ರಾಯ

Bengaluru Rural

ದೇವನಹಳ್ಳಿ: ಇಂದು ದೇಶದಲ್ಲಿ ಎಲ್ಲರೂ ಶಾಂತಿ, ಸಮಾನತೆಯೊಂದಿಗೆ ಸಹಬಾಳ್ವೆಯಿಂದ ಜೀವಿಸುತ್ತಿದ್ದೇವೆ ಎಂದರೆ ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಭಾರತೀಯ ಸಂವಿಧಾನ ಕಾರಣ ಎಂದು ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್ ಹೇಳಿದರು.

ದೇವನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ, ಯುವ ಮತದಾರರಿಗೆ ಮತದಾರರ ಗುರುತಿನಚೀಟಿ ವಿತರಿಸಿ ಮಾತನಾಡಿದರು. ನಮ್ಮನ್ನು ಕಾಪಾಡುತ್ತಿರುವ ಸಂವಿಧಾನವನ್ನು, ಅದರ ರಚನೆಯ ಕಾರಣಣೀಭೂತರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದರು.

ಹಲವು ರಾಷ್ಟ್ರಗಳು ದೇಶದ ಸಂವಿಧಾನವನ್ನು ಅನುಸರಿಸುತ್ತಿವೆ. ಪ್ರಜಾತಂತ್ರ ವ್ಯವಸ್ಥೆ ನಮ್ಮ ದೇಶಕ್ಕೆ ಅಗತ್ಯ. ಇಂಥ ವ್ಯವಸ್ಥೆ ಸುಭದ್ರವಾಗಿ, ಉತ್ತಮವಾಗಿ ನಡೆಯಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.

ನಮ್ಮನ್ನು ಆಳಲು ಉತ್ತಮ ಜನನಾಯಕರನ್ನು ಆಯ್ಕೆ ಮಾಡಿಕೊಳ್ಳುವುದು ಅಂತ್ಯ ಜವಾಬ್ದಾರಿಯುತವಾದ ದೇಶ ಸೇವೆಯಾಗಿದೆ. ಯುವಕ, ಯುವತಿಯರು ಮತ ಚಲಾಯಿಸುವುದರ ಜತೆಗೆ ನೆರೆಹೊರೆ ಹಾಗೂ ಕುಟುಂಬದವರು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ನಮ್ಮ ದೇಶದಲ್ಲಿ ವಿವಿಧ ಹಂತಗಳಲ್ಲಿ ಚುನಾವಣೆ ನಡೆದರೂ ಒಂದೇ ದಿನದಲ್ಲಿ ಲಿತಾಂಶ ೋಷಿಸಲಾಗುತ್ತದೆ. ಇದು ನಮ್ಮ ದೇಶದ ಹೆಮ್ಮೆ ಎಂದು ಜಿಪಂ ಸಿಇಒ ರವಿಕುಮಾರ್ ಹೇಳಿದರು.

ಮತದಾನ ಮಹತ್ವ ಮತ್ತು ಸಂವಿಧಾನದ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಬಿಎಲ್‌ಒ ಮತ್ತು ಚುನಾವಣಾ ಸಿಬ್ಬಂದಿಯನ್ನು ಗೌರವಿಸಲಾಯಿತು.