ಕೆ.ಎಸ್.ವಿಮಲಾ 
ಜಿಲ್ಲೆ

ಜನವಾದಿ ಮಹಿಳಾ ಸಮ್ಮೇಳನ ಆ.30 ರಿಂದ

ನರೇಶ್ ಕುಮಾರ್

ಸಿಂಧನೂರು: ನಗರದ ಟೌನ್‌ಹಾಲ್‌ನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ 12ನೇ ರಾಜ್ಯ ಸಮ್ಮೇಳನ ಆ.30 ರಿಂದ ಸೆ.1 ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವದೆಹಲಿ ಮಾಜಿ ಸಂಸದೆ, ಸಂಘಟನೆ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ.ಟೀಚರ್ ಅವರು ಚಾಲನೆ ನೀಡುವರು. ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸ್ತಾವನೆ ಮಾಡುವರು. ರಾಜ್ಯಾಧ್ಯಕ್ಷೆ ಡಾ.ಮೀನಾಕ್ಷಿ ಬಾಳೆ ಅಧ್ಯಕ್ಷತೆ ವಹಿಸುವರು.

ರಾಷ್ಟ್ರೀಯ ಕಾರ್ಯದರ್ಶಿ ಯು.ವಾಸುಕಿ, ಖಜಾಂಚಿ ಪುಣ್ಯವತಿ, ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಶಕುಂತಲಾ ನಾಗರಡ್ಡಿ ಭಾಗವಹಿಸುವರು ಎಂದರು. ಆ.31ರಂದು ಪಿಡಬ್ಲ್ಯುಡಿ ಕ್ಯಾಂಪಿನ ರಾಯಲ್ ಫಂಕ್ಷನ್ ಹಾಲ್‌ನಲ್ಲಿ ಕಾರ್ಯಕ್ರಮವನ್ನು ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ಯು.ವಾಸುಕಿ ಉದ್ಘಾಟಿಸುವರು.

ಸೆ.1ರಂದು ನಡೆಯುವ ಸಮಾರೋಪದಲ್ಲಿ ಪ್ರಾಂತ ರೈತ ಸಂಘದ ಬಸವಂತರಾಯಗೌಡ ಕಲ್ಲೂರು, ಸಮುದಾಯ ಸಂಘಟನೆಯ ಎಸ್.ದೇವೇಂದ್ರಗೌಡ ಭಾಗವಹಿಸುವರು ಎಂದು ತಿಳಿಸಿದರು. ಸಂಘಟನೆಯ ಗೌರಮ್ಮ, ದೇವಿ, ಶಕುಂತಲಾ ಪಾಟೀಲ್, ಸರಸ್ವತಿ ಪಾಟೀಲ್, ಗಿರಿಜಾ ಕಿಲ್ಲೇದ್, ಶ್ಯಾಮಲಾ ಪುಜಾರಿ ಇತರರಿದ್ದರು.