ಯಲಬುರ್ಗಾದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಪಪಂನಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಪಪಂ ಇಂಜಿನಿಯರ್ ಉಮೇಶ ಬೇಲಿ, ನೌಕರರಾದ ಎಚ್.ರಾಮಣ್ಣ, ಕನಕಪ್ಪ ನಾಯಕ, ರಮೇಶ ಬೆಲೇರಿ, ಶಿವಕುಮಾರ ಸರಗಣಾಚಾರ, ರವಿ ಪೋತೆದಾರ, ಸುಭಾಷ್ ಭಾವಿಮನಿ, ಯಂಕಣ್ಣ ಜೋಶಿ, ಸುಮಾ ಇದ್ದರು. 
ಜಿಲ್ಲೆ

ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಹಕ್ಕು ಚಲಾಯಿಸಿ

ಯಲಬುರ್ಗಾ: ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು ಎಂದು ಪಪಂ ಇಂಜಿನಿಯರ್ ಉಮೇಶ ಬೇಲಿ ಹೇಳಿದರು.

ಪಟ್ಟಣದ ಪಪಂ ಕಚೇರಿ ಆವರಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೈಕ್ ರ್ಯಾಲಿ ಮೂಲಕ ಮತದಾನ ಜಾಗೃತಿ ಜಾತಾಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ಭವಿಷ್ಯ ಬರೆಯುವ ಲೋಕಸಭೆ ಚುನಾವಣೆಯಲ್ಲಿ ಪಟ್ಟಣದ ಎಲ್ಲಾ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕು. ಬಲಿಷ್ಠ ಮತ್ತು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಮತ ಚಲಾಯಿಸಬೇಕು. ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಶ್ರಮಿಸುವ ಸೂಕ್ತ ಅಭ್ಯರ್ಥಿ ಆಯ್ಕೆಗೆ ಮುಂದಾಗಬೇಕು. ಎಲ್ಲರೂ ತಪ್ಪದೇ ವೋಟ್ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಬೇಕು ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಪಂ ನೌಕರರು ಬೈಕ್ ರ್ಯಾಲಿ ಮೂಲಕ ಮತದಾನ ಜಾಗೃತಿ ಮೂಡಿಸಿದರು.