Democracy, strengthenಹುಕ್ಕೇರಿ: ಪತ್ರಕರ್ತರು ನಿರಂತರವಾಗಿ ಸಮಾಜ ತಿದ್ದುವ ಕಾರ್ಯ ಮಾಡಬೇಕು. ಪ್ರಜಾಪ್ರಭುತ್ವ ಗಟ್ಟಿಗೊಳಿಸುತ್ತಿರುವ ಪತ್ರಿಕಾರಂಗದ ಕಾರ್ಯ ಶ್ಲಾಘನೀಯ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾರಂಗ ನಿತ್ಯ ಜನಸಾಮಾನ್ಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರವನ್ನು ಎಚ್ಚರಿಸುತ್ತಿದೆ. ಯುವ ಜನಾಂಗ ಸಾಮಾಜಿಕ ಜಾಲತಾಣ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ, ಮುದ್ರಣ ಮತ್ತು ದೃಶ್ಯ ಮಾಧ್ಯಮ ಜನರಿಗೆ ಜ್ಞಾನ ನೀಡುತ್ತವೆ. ಯುವ ಜನಾಂಗ ಕೇವಲ ಮನರಂಜನೆಗೆ ಒತ್ತು ನೀಡದೆ ಜೀವನ ರೂಪಿಸುವ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ಡ ಅವುಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ತಾಲೂಕು ಘಟಕದ ಅಧ್ಯಕ್ಷ ರವಿ ಕಾಂಬಳೆ, ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ, ಸಿಪಿಐ ಜಾವೀದ್ ಮುಶಾಪುರಿ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಯಿತು.
ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಲ್ಲಿಕಾರ್ಜುನರೆಡ್ಡಿ ಗೊಂದಿ, ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಪಂ ಇಒ ಟಿ.ಆರ್.ಮಲ್ಲಾಡದ, ಮುಖಂಡರಾದ ಮಹಾವೀರ ನಿಲಜಗಿ, ಕಿರಣ ರಜಪೂತ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ವರದಿಗಾರರಾದ ಚೇತನ ಹೊಳೆಪ್ಪಗೋಳ, ವಿಶ್ವನಾಥ ನಾಯಿಕ,
ಸಚಿನ ಖೋತ, ಮಲ್ಲಿಕಾರ್ಜುನ ಗುಂಡಕಲ್ಲೆ, ರಾಮಣ್ಣ ನಾಯಿಕ, ಸಚಿನ ಕಾಂಬಳೆ, ರಾಜು ಕುರುಂದವಾಡೆ, ಬಿ.ಬಿ.ಕೋತೇಕರ, ಮಹಾದೇವ ನಾಯಿಕ, ರಾಜಕುಮಾರ ಬಾಗಲಕೋಟಿ, ಗಣೇಶ ಮಲಾಬಾದಿ, ಅಪ್ಪು ಹುಕ್ಕೇರಿ, ಸೋಹನ ವಾಗೋಜಿ, ಸಂಜೀವ ಮುಷ್ಟಗಿ, ಕಲ್ಲಪ್ಪ ಪಾಮನಾಯಿಕ ಇತರರಿದ್ದರು. ವರದಿಗಾರ ಸಂಜು ಮುತಾಲಿಕ ಸ್ವಾಗತಿಸಿದರು. ಶಿಕ್ಷಕ ಶಿವಾನಂದ ಪಾಟೀಲ ನಿರೂಪಿಸಿದರು. ಮಹಾದೇವ ನಾಯಿಕ ವಂದಿಸಿದರು.