ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ನೇರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿದರು. ಸುಖದೇವ ಶಿಂಧೆ, ಅಮುಲ ಮಾಳಗೆ, ಮಾರುತಿ ಕವಳಗೆ, ಸತೀಶ ಅಪನ್ನವರ ಇತರರಿದ್ದರು. 
ಜಿಲ್ಲೆ

ಬೇಡಿಕೆ ಈಡೇರಿಸುವಂತೆ ಸಂಘಟನೆಗಳಿಂದ ಮನವಿ

ಬೆಳಗಾವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದವು.

ಛಲವಾದಿ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕರ್ತರು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸ್ಪರ್ಶ ಜಾತಿಗಳನ್ನು ಸಂವಿಧಾನದ ಅನುಚ್ಛೇದ 341 (1 ಮತ್ತು 2) ಉಲ್ಲಂಘನೆ ಮಾಡಿ ಜಾತಿಗಳನ್ನು ಸೇರ್ಪಡೆಗೊಳಿಸಿದ್ದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಯಲ್ಲಪ್ಪ ಹುದಲಿ, ದೀಪಕ ಮೇತ್ರಿ, ದುರ್ಗೇಶ್ ಮೇತ್ರಿ, ಶಂಕರ ದೊಡ್ಡಮನಿ, ಲಕ್ಷ್ಮೀ ಕೋಲ್ಕರ್, ಸಂಜಯ ಕೋಲ್ಕರ ಮತ್ತಿತರರು ಇದ್ದರು.

ನೇರ ನೇಮಕಾತಿ ಮಾಡಿ: ಬೆಳಗಾವಿ ಪಾಲಿಕೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ನೇರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನೂರಾರು ಪೌರಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರೂ ನೇಮಕಾತಿ ಆಗಿಲ್ಲ. ಹಾಗಾಗಿ ಪೌರ ಕಾರ್ಮಿಕರಿಗೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರಿ ಸೌಲಭ್ಯಗಳು ಸಿಗಲು ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಪೌರ ಕಾರ್ಮಿಕರ ಸಂಘಟನೆ ಮುಖಂಡ ಸುಖದೇವ ಶಿಂಧೆ, ಅಮುಲ ಮಾಳಗೆ, ಮಾರುತಿ ಕವಳಗೆ, ಯಶವಂತ ಸಣ್ಣಕ್ಕಿ, ಬಸವರಾಜ ನೇಸರಗಿ, ವಿಶ್ವನಾಥ ಜಾಧವ, ಸಂಜಯ ಬಿ. ಇತರರಿದ್ದರು.

ಬೇವು ಲೇಪಿತ ರಸಗೊಬ್ಬರ ಪೂರೈಸಿ

ರೈತರು, ನೆರೆ ಸಂತ್ರಸ್ತರು ಹಾಗೂ ನೇಕಾರ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆ ನಿವಾರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕೃಷಿಕ ಸಮಾಜದಿಂದ ಮನವಿ ಸಲ್ಲಿಸಲಾಯಿತು. ಕಡಿಮೆ ಬೆಲೆ ಹೆಸರಿನಲ್ಲಿ ರೈತರಿಗೆ ಕಳಪೆ ಬೀಜ ಸರಬರಾಜು ಮಾಡಿದ ಕಂಪನಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ತಕ್ಷಣ ಬೇವು ಲೇಪಿತ ರಸಗೊಬ್ಬರ ಪೂರೈಸಬೇಕು. ಕಳೆದು ವರ್ಷದ ಸುರಿದ ಮಳೆ ಹಾಗೂ ಕೃಷ್ಣಾ ನದಿ ಪ್ರವಾಹದಿಂದ ಸಮಸ್ಯೆ ಅನುಭವಿಸಿದ ನೆರೆ ಸಂತ್ರಸ್ತರ ಸಮಸ್ಯೆ ನಿವಾರಿಸಲು ಪರಿಹಾರ ಹಣ ಬಿಡುಗಡೆ ಮಾಡಬೇಕು.ರೈತರಿಗೆ ಮಾರಕವಾಗುವ ಹೊಸ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದು ಪಡಿಸಬೇಕು. ಗೋವಿನ ಜೋಳದ ಖರೀದಿ ಕೇಂದ್ರಗಳನ್ನು ತಕ್ಷಣವೇ ಆರಂಭಿಸಬೇಕು. ಎಂದು ಒತ್ತಾಯಿಸಿದರು. ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ಧಗೌಡ ಮೋದಗಿ, ಆರ್.ಎಸ್. ದರ್ಗೆ, ಎ.ಎಸ್.ಕುಂದರಗಿ ಸೇರಿ ಸಂಘದ ಪದಾಧಿಕಾರಿಗಳು ಮತ್ತಿರರರು ಉಪಸ್ಥಿತರಿದ್ದರು.