ಹುನಗುಂದ ಪುರಸಭೆ ಸಭಾಭವನದಲ್ಲಿ ನಡೆದ ಜನತಾದರ್ಶನ ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ ಅವರಿಗೆ ವೇ. ಮಹಾಂತಯ್ಯ ಗಚ್ಚಿನಮಠ ಮನವಿ ಸಲ್ಲಿಸಿದರು. ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡುದಾರಿ ಇದ್ದರು. 
ಜಿಲ್ಲೆ

ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮನವಿ

Vijayapura - Desk - Gurappa Lokuri

ಹುನಗುಂದ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ ನೇತೃತ್ವದಲ್ಲಿ ಶನಿವಾರ ಜನತಾದರ್ಶನ ಸಭೆ ನಡೆಯಿತು.
ಸಭೆಯಲ್ಲಿದ್ದ ಬೆರಳೆಣಿಕೆಯ ಸಾರ್ವಜನಿಕರು ಹಾಗೂ ರೈತರು ಮತ್ತು ಮುಖಂಡರು ಪಟ್ಟಣದ ರಸ್ತೆ, ಚರಂಡಿ, ಬೀದಿ ದೀಪ, ತರಕಾರಿ ಮಾರುಕಟ್ಟೆ, ಶೌಚಗೃಹಗಳ ದುರಸ್ತಿ, ಸ್ವಚ್ಛತೆ ಸೇರಿ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದರು.
ಮುಖ್ಯಾಧಿಕಾರಿ ಪಿ.ಕೆ. ಗುಡುದಾರಿ ಮಾತನಾಡಿ, ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದ ಸಾರ್ವಜನಿಕರ 9 ಅರ್ಜಿಗಳು ಬಂದಿದ್ದು, ಕೂಡಲೇ ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಮಲ್ಲಿಕಾರ್ಜುನ ಎಚ್. ಕಟ್ಟಿಮನಿ, ವಿದ್ಯುತ್ ಇಲಾಖೆ ಜೆ.ಇ. ಸೂಲೇಮಾನ್ ಕಂದಗಲ್ಲ, ಶಿರಸ್ತೇದಾರ ಎಸ್. ಎಸ್. ಮುಂಡೇವಾಡೆ, ಉಪನೋಂದಣಿ ಇಲಾಖೆ ಚಂದ್ರಶೇಖರ ಬಳಗೊಂಡ, ರೈತ ಮುಖಂಡರಾದ ಕೃಷ್ಣ ಜಾಲಿಹಾಳ, ಮಲ್ಲನಗೌಡ ಪಾಟೀಲ, ವಿವಿಧ ಇಲಾಖೆ ಅಧಿಕಾರಿಗಳು ಪುರಸಭೆ ಸಿಬ್ಬಂದಿ ಎಸ್.ಟಿ. ಉಳ್ಳಿ, ಮಹಾಂತೇಶ ತಾರಿವಾಳ,ಬಾಬು ಲೈನ್ ಇತರರಿದ್ದರು.