ರಾಯಚೂರು ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿ ಸ್ಥಾನದಲ್ಲಿದ್ದಗ ನೀಡಿದ ಭರವಸೆಯಂತೆ ದೇವನಹಳ್ಳಿ ರೈತರ ಭೂಸ್ವಾದೀನ ಹಿಂಪಡಿಯಬೇಕೆಂದು ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕ ಮರೆಪ್ಪ ಹರವಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರೈತರ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳಲು ಮುಂದಾಗಿದೆ.
ದೇವನಹಳ್ಳಿ ಭೂಸ್ವಾದೀನ ವಿಚಾರದಲ್ಲಿ ಜು.15 ರಂದು ನಡೆಯುವ ಅಂತಿಮ ತೀರ್ಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ನ್ಯಾಯ ನೀಡಿ, ಭೂಸ್ವಾದೀನವನ್ನು ಕೈ ಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ರೈತರ ಪರ ನಿಲುವು ಹೊಂದಿದ ಸಿದ್ದರಾಮಯ್ಯ ಅವರು ಕೃಷಿ ಕ್ಷೇತ್ರವನ್ನು ಉಳಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕು.ನಮ್ಮ ಸರ್ಕಾರ ಅಧಿಕಾರಕೆ ಬಂದರೆ ಭೂ ಸ್ವಾದಿನ ಹಿಂಪಡಿಯುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಸಿದ್ದರಾಮಯ್ಯ ಅವರು ನಡೆಯಬೇಕು. ದೇವನಹಳ್ಳಿ ರೈತರು ಅನೇಕ ವರ್ಷಗಳಿಂದ ಭೂಮಿ ನೀಡುವುದಿಲ್ಲ ಎಂದು ಹೋರಾಟ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳಿಸುವ ಯಾವುದೇ ಪಕ್ಷವನ್ನು ಅಧಿಕಾರದಿಂದ ತಕ್ಕ ಪಾಠ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಆಂಜನೇಯ ಕುರುಬದೊಡ್ಡಿ, ಬೂದಯ್ಯ ಸ್ವಾಮಿ, ಭೀಮಣ್ಣ, ವಿಜಯರಾಣಿ ಇದ್ದರು.