ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ಚಾಲ್ತಿಯಲ್ಲಿದ್ದ ಬಿ.ಎ ಹಾನರ್ಸ್ ಕೋರ್ಸ್ ಅನ್ನು ಮುಚ್ಚಲಾಗಿದೆ. ಮತ್ತೆ ಪ್ರಸ್ತುತ ವರ್ಷದ ಸಾಲಿನಿಂದ ಕೋರ್ಸ್ ಆರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿವಿ ಕುಲಪತಿ ಕೆ.ಶಿವಚಿತ್ತಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಮಂಡ್ಯ ವಿವಿ ಆರಂಭವಾದಗಿನಿಂದಲೂ ಬಡವರ, ರೈತರ, ಕಾರ್ಮಿಕರ ಹಾಗೂ ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಬಿ.ಎ.ಹಾನರ್ಸ್(ಬ್ಯಾಚುರಲ್ ಆಫ್ ಬಿಜಿನಸ್ ಎಕನಾಮಿಕ್ಸ್) ಕೋರ್ಸ್ ಅನ್ನು 2017ರಲ್ಲಿ ಸರ್ಕಾರದ ಅನುಮತಿಯೊಂದಿಗೆ ಆರಂಭಿಸಲಾಯಿತು. ಅಂದಿನ ಕುಲಸಚಿವರ ವೈಯಕ್ತಿಕ ಪ್ರತಿಷ್ಠೆಯಿಂದ ಮುಚ್ಚಲಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳು ಈ ಕೋರ್ಸ್ ಅನ್ನು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ ಹೋಗಿರುತ್ತಾರೆ. ಆದರೆ 2017 ರಿಂದ ಮುಚ್ಚಿರುವುದು ಎಷ್ಟು ಸರಿ?. ಬೆಂಗಳೂರಿನಲ್ಲಿರುವ ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಬ ಸಂಸ್ಥೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋರ್ಸ್‌ಗಳಿಗಿಂತಲೂ ಹಿಂದೆಯೇ ಆರಂಭವಾದ ಕೋರ್ಸ್ ತುಂಬಾ ಉತ್ತಮವಾಗಿದೆ. ಇದು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು, ತಕ್ಷಣ ಆರಂಭಿಸಬೇಕು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಮುಖಂಡರಾದ ಬಿ.ಕೆ.ಸತೀಶ್, ವೆಂಕಟೇಶ್, ಜೋಸೆಫ್ ಇದ್ದರು.