ಜಿಲ್ಲೆ

ಹನೆಹಳ್ಳಿ ದಲಿತ ಯುವಕನ ಹತ್ಯೆ ಪ್ರಕರಣ ಭೇದಿಸಲು ಆಗ್ರಹ

ಉಡುಪಿ: ಬ್ರಹ್ಮಾವರ ತಾಲೂಕು ಹನೆಹಳ್ಳಿ ಎಂಬಲ್ಲಿ ದಲಿತ ಯುವಕ ಕೃಷ್ಣ ಅವರನ್ನು ಶೂಟ್​ ಮಾಡಿ ಕೊಲೆಗೈದು 2 ತಿಂಗಳು ಕಳೆದರೂ ಪೊಲೀಸರು ಹತ್ಯೆ ಪ್ರಕರಣ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದು, ಕುಟುಂಬಕ್ಕೆ ನ್ಯಾಯದೊರಕಿಸಿ ಕೊಡುವಂತೆ ಗೃಹಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದು ದಲಿತ ಸಂರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹತ್ಯೇಗಿಡಾದ ಯುವಕ ಸಭ್ಯ ನಾಗರಿಕ ಆಗಿದ್ದು, ಅವನು ಯಾವುದೇ ಸಮಾಜ ವಿರೋಧಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದವನಲ್ಲ. ಆತನ ವಿರುದ್ಧ ಯಾವುದೇ ಠಾಣೆಯಲ್ಲಿ ಯಾವುದೇ ದೂರು ಸಹ ಇರುವುದಿಲ್ಲ. ಹತ್ಯೆ ನಡೆಸಿದ ವ್ಯಕ್ತಿಗಳು ಆತನ ಮನೆಯಿಂದ ಕಬ್ಬಿಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಶೋಷಿತ ಸಮುದಾಯದ ವ್ಯಕ್ತಿಯೊಬ್ಬರ ಶೂಟ್​ ಔಟ್​ ಕೊಲೆಯಿಂದ ಭಯಭೀತ ವಾತಾವರಣ ನಿಮಾರ್ಣವಾಗಿದ್ದು, ತನಿಖೆ ಬಗ್ಗೆ ಪೊಲೀಸ್​ ಇಲಾಖೆ ಗಾಢ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣ ಆಗಿದೆ ಎಂದರು.

ಅರೆಬೆತ್ತಲೆ ಪ್ರತಿಭಟನೆ
ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್​ ಮಾಸ್ತರ್​ ಮಾತನಾಡಿ, ಜಿಲ್ಲಾಡಳಿತ ಉಜ್ವಲ ಬಡಾ ಗ್ರಾಮದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ದಲಿತರ ಶವ ಸುಡಲು ಅಡ್ಡಿಪಡಿಸಲಾಗುತ್ತಿದೆ. ಈ ಬಗ್ಗೆಯೂ ಜಿಲ್ಲಾಡಳಿತ ಮೌನವಹಿಸಿದೆ. 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಉಚ್ಚಿಲ ರುದ್ರ ಭೂಮಿಯ ಕಾಮಗಾರಿಯನ್ನು ಈವರೆಗೆ ಪೂರ್ತಿಗೊಳಿಸದೆ ದಲಿತರಿಗೆ ಅನ್ಯಾಯವೆಸಗಿದೆ. ಕಾಮಗಾರಿಯ ಬಗ್ಗೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಈ ಸಮಸ್ಯೆಗಳ ಬಗ್ಗೆ ಜಿಲ್ಲಾ ಪೊಲೀಸ್​ ಇಲಾಖೆ, ಜಿಲ್ಲಾಡಳಿತ 15 ದಿನಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಟನೆ ಪ್ರಮುಖರಾದ ಮಂಜುನಾಥ ಗಿಳಿಯಾರು, ಶ್ಯಾಮ್​ರಾಜ್​ ರ್ಭಿತಿ, ಶ್ಯಾಮ್​ ಸುಂದರ್​ ತೆಕ್ಕಟ್ಟೆ, ಕುಮಾರ್​ ಕೋಟ, ಶ್ರೀನಿವಾಸ್​ ವಡ್ಡರ್ಸೆ ಮೊದಲಾದವರು ಉಪಸ್ಥಿತರಿದ್ದರು.