ಜಿಲ್ಲೆ

ಸಂತ್ರಸ್ತರಿಗೆ ಮನೆ ನೀಡಲು ಒತ್ತಾಯ: ನಾವು ದ್ರಾವಿಡ ಕನ್ನಡಿಗರು ಪ್ರತಿಭಟನೆ

ಮಂಡ್ಯ: ನಗರ ವ್ಯಾಪ್ತಿಯ ಮತದಾರರಲ್ಲಿ ಕೆಲವರು ಸ್ವಂತ ಮನೆಯಿಲ್ಲವೆಂದು ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದು, ಅರ್ಹರಿಗೆ ಮನೆ ನೀಡಬೇಕೆಂದು ನಾವು ದ್ರಾವಿಡ ಕನ್ನಡಿಗರು ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂತ್ರಸ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಧರಣಿ ನಡೆಸಿದ ಪ್ರತಿಭಟನಾಕಾರರು, ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರು ಮನೆಯಿಲ್ಲದವರಿಗೆ ಮನೆ ಕೊಡಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಅದರಂತೆ 5 ಸಾವಿರ ಮನೆಗಳಿಗೆ ಮಂಜೂರು ಆಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಪರಿಶೀಲಿಸಿ ಅರ್ಹ ಸಂತ್ರಸ್ತರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಅರ್ಹ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ನಿವೇಶನ, ಮನೆ ವಿತರಿಸಬೇಕೆಂದರೆ ದತ್ತಾಂಶ ಕರಾರುವಕ್ಕಾಗಿ ಇರಬೇಕಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ತಿಳಿಸಿ ಕೂಡಲೇ ಸ್ವೀಕರಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಸಂತ್ರಸ್ತರ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ರೋಹಿಣಿ ಅವರಿಗೆ ಮನವಿ ಸಲ್ಲಿಸಿದರು.

ನಾವು ದ್ರಾವಿಡ ಕನ್ನಡಿಗರು ಹೋರಾಟ ಸಮಿತಿಯ ಅಧ್ಯಕ್ಷ ಅಭಿ, ಆರ್.ಸಿಮ್ರಾನ್, ಎಸ್.ನಂದಿನಿ, ಡಿ.ಎಸ್.ಸವಿತಾ ಇತರರಿದ್ದರು.