ಇಂಡಿ ತಾಲೂಕಿನ ಹಿರೇಮಸಳಿ, ಶಿರಶ್ಯಾಡ, ಬರಗುಡಿ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಮಂಜು ತೇಲಿ, ಅಯೂಬ್ ನಾಟೀಕಾರ, ಸೋಮು ಹಿರೇಮಠ ಇತರರಿದ್ದರು. 
ಜಿಲ್ಲೆ

ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ

Vijayapura

ಇಂಡಿ: ತಾಲೂಕಿನ ಹಿರೇಮಸಳಿ, ಶಿರಶ್ಯಾಡ, ಬರಗುಡಿ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಕರವೇ ಅಧ್ಯಕ್ಷ ಶಿವು ಮಲಕಗೊಂಡ ಮಾತನಾಡಿ, ಹಲವು ದಿನಗಳಿಂದ ಈ ಗ್ರಾಮಗಳ ಬಸ್ ಓಡಾಟ ಸ್ಥಗಿತಗೊಳಿಸಿದ್ದರಿಂದ ಜನರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಬಸ್ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಬಸ್ ಘಟಕ ವ್ಯವಸ್ಥಾಪಕ ಎಸ್.ಟಿ.ಹಾವಳಗಿ ಸ್ಥಳಕ್ಕೆ ಆಗಮಿಸಿ, ಹಿರೇಮಸಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರು. ಶಿರಶ್ಯಾಡ ಹಾಗೂ ಬರಗುಡಿ ಗ್ರಾಮಗಳಿಗೆ ಎರಡು ದಿನಗಳಲ್ಲಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಮಂಜು ತೇಲಿ, ಅಯೂಬ್ ನಾಟೀಕಾರ, ಸೋಮು ಹಿರೇಮಠ, ಸಲೀಂ ನಾಟೀಕಾರ್, ಶಿವು ಪಾಸೋಡಿ ಇತರರಿದ್ದರು.