ಕವಿತಾಳದಲ್ಲಿ ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯರು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜುಗೆ ಭಾನುವಾರ ಮನವಿ ಸಲ್ಲಿಸಿದರು. ರೈತ ಸಂಘದ ರಾಜ್ಯ ನಾಯಕ ಅಮರೇಶ ಚಾಗಬಾವಿ, ಕರವೇ ತಾಲೂಕ ಅಧ್ಯಕ್ಷ ಕೆ. ರಾಘವೇಂದ್ರ ಖಾಜನಗೌಡ, ಹೋಬಳಿ ಅಧ್ಯಕ್ಷ ಸಂತೋಷ ಕಲಾಶೆಟ್ಟಿ, ಜಯ ಭಾರತ ಸಂಘಟನೆಯ ಎಮ್.ಎಸ್, ಜಾವೀದ್ ಇದ್ದರು. 
ಜಿಲ್ಲೆ

ಶಿಕ್ಷಕರ ವರ್ಗಾವಣೆ ತಡೆಯಲು ಆಗ್ರಹ

ಕವಿತಾಳ: ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗಿದ್ದು, ರಾಜ್ಯ ಸರ್ಕಾರ ಶಿಕ್ಷಕರ ವರ್ಗಾವಣೆ ತಡೆಯಬೇಕು ಎಂದು ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯರು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜುಗೆ ಭಾನುವಾರ ಮನವಿ ಸಲ್ಲಿಸಿದರು.


ಕರವೇ ತಾಲೂಕ ಅಧ್ಯಕ್ಷ ಕೆ. ರಾಘವೇಂದ್ರ ಖಾಜನಗೌಡ ಮಾತನಾಡಿ, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಂದುವರೆದಿದ್ದು, ಸಿರವಾರ ಮತ್ತು ಮಾನ್ವಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ 48, 725 ಇದ್ದು, ಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರು 1568 ಮತ್ತು ಪ್ರೌಢ ಶಾಲೆ ಶಿಕ್ಷಕರ ಸಂಖ್ಯೆ 462 ಇರಬೇಕಾಗಿತ್ತು.
ಇದನ್ನೂ ಓದಿ: ಶಿಕ್ಷಕರ ವರ್ಗಾವಣೆ ಮಾಡಲು ಬಿಇಒಗೆ ಮನವಿ

ಪ್ರಾಥಮಿಕ ಶಾಲೆಯ 351 ಶಿಕ್ಷಕರು ವರ್ಗಾವಣೆಗೊಂಡಿದ್ದು , ಎರಡೂ ತಾಲೂಕಿನ ನಡುವೆ 78 ಶಿಕ್ಷಕರು ಬಂದಿದ್ದಾರೆ. ಇದರಿಂದ 947 ಶಿಕ್ಷಕರ ಹುದ್ದೆ ಖಾಲಿಯಿದೆ. ಪ್ರೌಢ ಶಾಲೆಗೆ ಒಟ್ಟು 462 ಶಿಕ್ಷಕರು ಖಾಯಂ ಇರಬೇಕು.

ಸದ್ಯ 24 ಶಿಕ್ಷಕರು ಬಂದಿದ್ದಾರೆ. ಇದರಿಂದ ತಾಲೂಕಿನಲ್ಲಿ ಶಿಕ್ಷಣ ಕುಂಠಿತವಾಗುತ್ತದೆ. ಆದ್ದರಿಂದ ವರ್ಗಾವಣೆ ತಡೆಯಬೇಕು ಮತ್ತು ವರ್ಗಾವಣೆಗೊಂಡ ಶಿಕ್ಷಕರನ್ನು ಮರಳಿ ಕರೆಸಬೇಕು. ಇಲ್ಲದಿದ್ದರೆ ಜಿಲ್ಲಾ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು.


ಕರವೇ ತಾಲೂಕ ಅಧ್ಯಕ್ಷ ಕೆ. ರಾಘವೇಂದ್ರ ಖಾಜನಗೌಡ, ಹೋಬಳಿ ಅಧ್ಯಕ್ಷ ಸಂತೋಷ ಕಲಾಶೆಟ್ಟಿ, ಜಯ ಭಾರತ ಸಂಘಟನೆಯ ಎಮ್.ಎಸ್, ಜಾವೀದ್ ಇದ್ದರು.