ಹಾನಗಲ್ಲ: ಬೆಳಗಾಲಪೇಟೆ ಗ್ರಾಮದ ಶ್ರೀಗುರು ಕುಮಾರೇಶ್ವರ ಮಠದ ಆಸ್ತಿಯಲ್ಲಿ ಬೋಗಟದಾರ ಕಾಲಂನಲ್ಲಿ ಈಗಿರುವಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು, ಇತರರ ಹೆಸರನ್ನು ಸೇರಿಸಬಾರದು ಎಂದು ಶ್ರೀ ಗುರು ಕುಮಾರೇಶ್ವರ ಜೀಣೋದ್ಧಾರ ಸಾರ್ವಜನಿಕ ಸೇವಾ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ 2 ಎಕರೆ 38 ಗುಂಟೆ ಇರುವ ಜಾಗವನ್ನು ಲಿಂ. ಹಾನಗಲ್ಲ ಶ್ರೀ ಗುರು ಕುಮಾರಶಿವಯೋಗಿಗಳ ಮಠ ಕಟ್ಟುವ ಉದ್ದೇಶಕ್ಕಾಗಿ ಬಿನ್ ಶೇತ್ಕಿ ಮಾಡಿಸಲಾಗಿದೆ. ಈಗ ಕೆಲ ಪಟ್ಟಭದ್ರರು ಆಸ್ತಿಯನ್ನು ದುರುದ್ದೇಶ ಹಾಗೂ ಸ್ವಾರ್ಥಕ್ಕಾಗಿ ಬಳಸಲು ನಂತರದ ಉತ್ತರಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದುರುಪಯೋಗ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಈ ಆಸ್ತಿಯನ್ನು ಮಠ ಕಟ್ಟಲು ಕಾಯ್ದಿರಿಸಬೇಕು. ಆಸ್ತಿಯ ಬೋಗಟದಾರ ಕಾಲಂನಲ್ಲಿ ಬೇರೆಯವರ ಹೆಸರು ನೋಂದಾಯಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಯಲಿಂಗಪ್ಪ ಹಳಿಕೊಪ್ಪದ, ಮನೇಶಗೌಡ ಮೆಳ್ಳಾಗಟ್ಟಿ, ಶಂಭುಲಿಂಗ ಕಮಡೊಳ್ಳಿ, ಪ್ರಶಾಂತ ಮುಚ್ಚಂಡಿ, ವೀರಣ್ಣ ಹುಗ್ಗಿ, ಶೇಶಣ್ಣ ಹೂಗಾರ, ಶಿವಣ್ಣ ಕುಂಬಾರ, ಶಂಭುಲಿಂಗ ಮಾವಲಿ ಇತರರಿದ್ದರು.
ಆಸ್ತಿ ದಾಖಲೆಯಲ್ಲಿ ಮೊದಲು ಬೋಗಟದಾರರು ಇದ್ದರು. ಅವರ ಹೆಸರು ತೆಗೆಯಲು ಈಗಿರುವ ಶ್ರೀ ಕುಮಾರ ಸ್ವಾಮೀಜಿ 2022ರಲ್ಲಿ ಬೋಗಟುದಾರರ ಹೆಸರನ್ನು ತೆಗೆಯಲು ಪತ್ರ ನೀಡಿದ್ದರು. ಆಗ ಕಾನೂನು ರೀತಿ ಬೋಗಟುದಾರರ ಹೆಸರು ತೆಗೆಯಲಾಗಿತ್ತು. ನಂತರ ನಾನು ಪ್ರಮಾದದಿಂದ ಈ ಹಿಂದೆ ಬೋಗಟದಾರರ ಹೆಸರನ್ನು ತೆಗೆಯಲು ಪತ್ರ ನೀಡಿದ್ದೆ. ಒಬ್ಬರ ಹೆಸರನ್ನು ಮಾತ್ರ ಬೋಗಟದಾರರ ಕಾಲಂನಲ್ಲಿ ನಮೂದಿಸಲು ಪತ್ರ ನೀಡಿದರು. ನಾವು ಯಥಾಸ್ಥಿತಿ ಮುಂದುವರಿಸಿದೆವು. ಈಗ ಹೈಕೋರ್ಟ್ ಆದೇಶವಾಗಿದೆ. ಕಾನೂನು ತಜ್ಞರ ಸಲಹೆ ಪಡೆದು, ಪಂಚಾಯಿತಿ ಸಾಮಾನ್ಯ ಸದಸ್ಯರ ಸಭೆಯಲ್ಲಿ ಈ ಬಗ್ಗೆ ವಿಸõತವಾಗಿ ರ್ಚಚಿಸಿ ಕ್ರಮ ಜರುಗಿಸಲಾಗುವುದು. ಮಠದ ಆಸ್ತಿ ದಾಖಲೆಯ ಬೋಗಟದಾರರ ಕಾಲಂನಲ್ಲಿ ಯಾರ ಹೆಸರನ್ನೂ ನಮೂದಿಸಕೂಡದು, ಮಠದ ಆಸ್ತಿ ಉಳಿಸಿ ಎಂದು 500ಕ್ಕೂ ಅಧಿಕ ಪತ್ರಗಳು ಬಂದಿವೆ. ಸಾರ್ವಜನಿಕರು ಮನವಿ ನೀಡಿದ್ದಾರೆ. | ಚಂದ್ರಕಾಂತ ಮಣ್ಣವಡ್ಡರ, ಪಿಡಿಒ ಬೆಳಗಾಲಪೇಟೆ ಗ್ರಾಪಂ