ಜಿಲ್ಲೆ

ದುಸ್ಥಿತಿ ಕಟ್ಟಡಗಳನ್ನು ಗುರುತಿಸಲು ಆಗ್ರಹ

ಲೋಕೇಶ್ ಮನು. ಡಿ

 ಬೇಲೂರು: ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿದ್ದ ಹಳೆಯ ವಾಣಿಜ್ಯ ಮಳಿಗೆಯ ಸಜ್ಜಾ ಕುಸಿದು ಇಬ್ಬರು ಸಾವು, ಮೂವರು ಗಂಭೀರವಾಗಿ ಗಾಯ ಗೊಂಡ ಪ್ರಕರಣ ಸಂಬಂಧ ಕಟ್ಟಡದ ಮಾಲೀಕರ ಪುತ್ರ ಅವಿನಾಶ್ ಎಂಬುವವರ ವಿರುದ್ಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾನುವಾರ ಕುಸಿದ ಕಟ್ಟಡದ ಸಜ್ಜ್ಜಾ ಪಕ್ಕದಲ್ಲಿ ಮತ್ತೆ ಯಾವುದೇ ಅನಾಹುತ ಸಂಭವಿಸದಂತೆ ಪಕ್ಕದಲ್ಲಿದ್ದ ಇತರೆ ಮಳಿಗೆಗಳನ್ನು ಸೀಜ್ ಮಾಡಿ ಸಾರ್ವಜನಿಕರು ಯಾರೂ ಹೋಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಸ್ಥಳದಲ್ಲಿ ಕೆಎಸ್‌ಆರ್‌ಪಿ ಎರಡು ತುಕಡಿಯನ್ನು ನಿಯೋಜಿಸಲಾಗಿದೆ. ಪಟ್ಟಣದಲ್ಲಿರುವ ದುಸ್ಥಿತಿ ಕಟ್ಟಡಗಳನ್ನೂ ಗುರುತಿಸಿ ಅವುಗಳನ್ನ ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.