ಜಿಲ್ಲೆ

ಅಕ್ರಮ ಗೋ ಸಾಗಣೆ ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ

ಧಾರವಾಡ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಉಲ್ಲಂಘಿಸಿ ಸಾವಿರಾರು ಅಕ್ರಮ ಗೋ ಸಾಗಣೆ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಮತ್ತು ಎನ್‌ಐಎ (ರಾಷ್ಟ್ರೀಯ) ತನಿಖಾ ದಳ) ತನಿಖೆಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನಾ ಸಂಘಟನೆಯಿಂದ ಶುಕ್ರವಾರ ಧಾರವಾಡ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ. ಅವರ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.

ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕಾದ ಕರ್ತವ್ಯವಿದ್ದರೂ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಸಾವಿರಾರು ಅಕ್ರಮ ಗೋ ಸಾಗಣೆ ಪ್ರಕರಣಗಳು ಮತ್ತು ಗೋವುಗಳ ಮೇಲೆ ಪೈಶಾಚಿಕ ದೌರ್ಜನ್ಯಗಳು ನಡೆಯುತ್ತಿವೆ. ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಅಕ್ರಮ ಗೋ ಸಾಗಣೆ ವಾಹನಗಳನ್ನು ತಡೆದು ಕಾನೂನುಬದ್ಧವಾಗಿ ಪೊಲೀಸರ ಬಳಿ ಒಪ್ಪಿಸಿದರೂ ಅವರ ಮೇಲೆ ಪ್ರಕರಣ ದಾಖಲಿಸುತ್ತಿಲ್ಲ. ಗೋಹತ್ಯೆ ಮಾಫಿಯಾ ಮತ್ತು ಪಶು ಕ್ರೌರ್ಯ ಗ್ಯಾಂಗ್‌ಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಬೆಂಗಳೂರು ನಗರದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ಖಂಡನೀಯ. ಮೈಸೂರಿನಲ್ಲಿ ಮಾರಕಾಸ್ತ್ರಗಳಿಂದ ಗೋವಿನ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಗದಗ, ಬಾಗಲಕೋಟೆ, ಧಾರವಾಡ, ಹುಬ್ಬಳ್ಳಿಯಲ್ಲಿ ಅಕ್ರಮವಗಿ ಗೋಹತ್ಯೆ ಮಾಡಿರುವ ಪ್ರಕರಣಗಳು ಭೀತಿ ಹುಟ್ಟಿಸಿವೆ. ರಾಜ್ಯಪಾಲರು ಸಂವಿಧಾನಿಕ ಅಽಕಾರ ಬಳಸಿಕೊಂಡು ಗೋ ಹತ್ಯೆ ನಿಷೇಧ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಗೋಹತ್ಯೆ ಮಾಫಿಯಾ ವಿರುದ್ಧ ಎನ್‌ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಕ್ಕೆ ಶಿಫಾರಸು ಮಾಡಬೇಕು. ಗೋ ಸಂರಕ್ಷಣೆಯಲ್ಲಿ ತೊಡಗಿರುವ ಹಿಂದುಪರ ಸಂಘಟನೆ ಕಾರ್ಯಕರ್ತರ ಮೇಲಿನ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು. `ಗೋ ಸಂರಕ್ಷಣಾ ನಿಯಂತ್ರಣ ದಳ' ರಚಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಅಣ್ಣಪ್ಪ ದಿವಟಗಿ, ಸೋಮಶೇಖರ ಕಮತಗಿ, ಮಂಜು ಕಾಟಕರ, ಬಸವರಾಜ ದುರ್ಗದ, ಮೈಲಾರ ಗುಡ್ಡಪ್ಪನವರ, ಈರಯ್ಯ ಸಾಲಿಮಠ, ವಿಜಯ ಗುಡಸಲಮನಿ, ವೆಂಕಟೇಶ ದಾಸರ ಇದ್ದರು.